ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರ್ಚ್ ವೇಳೆಗೆ ಹಣದುಬ್ಬರ ದರ ಕುಸಿತ:ಪ್ರಣಬ್ ಮುಖರ್ಜಿ (Inflation | Government | Pranab Mukherjee | Economy)
Bookmark and Share Feedback Print
 
ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿರುವ ಶೇ.8ರಷ್ಟಿದ್ದ ಹಣದುಬ್ಬರ ದರ ನಿಧಾನವಾಗಿ ಇಳಿಕೆಯಾಗುತ್ತಿದ್ದು,ಮುಂಬರುವ ಮಾರ್ಚ್ ವೇಳೆಗೆ ಹಣದುಬ್ಬರ ದರ ಶೇ.6ಕ್ಕೆ ಕುಸಿಯಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಹಣದುಬ್ಬರ ದರ ಇಳಿಕೆಯಾಗಿ ಇದೀಗ ಒಂದಂಕಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದ್ದು, ಮಾರ್ಚ್ ವೇಳೆಗೆ ಶೇ.6ಕ್ಕೆ ತಲುಪುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ದರ ಗರಿಷ್ಠ ಪ್ರಮಾಣದಲ್ಲಿತ್ತು.ಮುಂದಿನ ದಿನಗಳಲ್ಲಿ ಇಳಿಕೆಯಾಗಲಿದೆ. ಜನತೆ ಆತಂಕ ಪಡುವುದು ಬೇಡ ಎಂದರು.

ಏಪ್ರಿಲ್ 2010ರ ಅವಧಿಯಲ್ಲಿ ಹಣದುಬ್ಬರ ದರ ಶೇ.11ಕ್ಕೆ ಏರಿಕೆ ಕಂಡಿತ್ತು. ಅಕ್ಟೋಬರ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.8.6ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ