ಸ್ಪೈಸ್ : 22 ಮಿಲಿಯನ್ ಡಾಲರ್‌ಗಳಿಗೆ ನ್ಯೂಟೆಲ್ ಕಂಪೆನಿ ಖರೀದಿ
ನವದೆಹಲಿ, ಮಂಗಳವಾರ, 7 ಡಿಸೆಂಬರ್ 2010( 19:55 IST )
ಮೊಬೈಲ್ ಹ್ಯಾಂಡ್‌ಸೆಟ್ ವಿತರಕ ಸಂಸ್ಥೆ ಸ್ಪೈಸ್, ಥೈಲೆಂಡ್ ಮೂಲದ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿಯಾದ ನ್ಯೂ ಟೆಲ್ ಕಾರ್ಪೋರೇಶನ್ ಕಂಪೆನಿಯನ್ನು 22 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ವೆಲ್‌ಕೊ ಮೊಬೈಲ್ ಬ್ರಾಂಡ್ ಹ್ಯಾಂಡ್‌ಸೆಟ್ ತಯಾರಿಕೆ ಸಂಸ್ಥೆಯಾದ ನ್ಯೂಟೆಲ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಥೈಲೆಂಡ್, ವಿಯಟ್ನಾಂ, ಮೈನ್ಮಾರ್, ಕಾಂಬೋಡಿಯಾ ಮತ್ತು ಲಾವೋಸ್ ದೇಶಗಳಿಗೆ ವಹಿವಾಟು ವಿಸ್ತರಿಸಲು ಸುಲಭವಾಗುತ್ತದೆ ಎಂದು ಸ್ಪೈಸ್ ಗ್ರೂಪ್ ಮುಖ್ಯಸ್ಥ ಬಿ.ಕೆ.ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನ್ಯೂಟೆಲ್ ಕಾರ್ಪೋರೇಶನ್ ವಾರ್ಷಿಕವಾಗಿ 56 ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದ್ದು, ಥೈಲೆಂಡ್‌ನಲ್ಲಿ ಸ್ಥಳೀಯ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಥೈಲೆಂಡ್ ಮಾರುಕಟ್ಟೆಯಲ್ಲಿ ಶೇ.8ರಷ್ಟು ಪಾಲನ್ನು ಹೊಂದಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.