ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶಿಯ ಕಾರುಗಳ ಮಾರಾಟದಲ್ಲಿ ಶೇ.20ರಷ್ಟು ಹೆಚ್ಚಳ (Domestic bikes | Car sales)
Bookmark and Share Feedback Print
 
PTI
ದೇಶಿಯ ಕಾರುಗಳ ಮಾರಾಟ ನವೆಂಬರ್ ತಿಂಗಳ ಅವಧಿಯಲ್ಲಿ ಶೇ.20.79ರಷ್ಟು ಏರಿಕೆಯಾಗಿದ್ದು, 1,61,497 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷದ ನವೆಂಬರ್ ತಿಂಗಳ ಅವಧಿಯಲ್ಲಿ 1,33,703 ಕಾರುಗಳನ್ನು ಮಾರಾಟ ಮಾಡಲಾಗಿತ್ತು.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್(ಸಿಯಾಮ್)ಪ್ರಕಾರ, ನವೆಂಬರ್ ತಿಂಗಳ ಅವಧಿಯ ಮೋಟಾರ್‌ಸೈಕಲ್ ಮಾರಾಟದಲ್ಲಿ ಶೇ.15.61ರಷ್ಟು ಏರಿಕೆಯಾಗಿದ್ದು, 7,10,182 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾಗಿದೆ.

ಒಟ್ಟು ದ್ವಿಚಕ್ರ ವಾಹನಗಳ ಮಾರಾಟ ನವೆಂಬರ್ ತಿಂಗಳ ಅವಧಿಯಲ್ಲಿ ಶೇ.17.68ರಷ್ಟು ಏರಿಕೆಯಾಗಿದ್ದು, 9,30,370 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳ ಅವಧಿಯಲ್ಲಿ 7,90,613 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೂಡಾ ಶೇ.18.26ರಷ್ಟು ಏರಿಕೆಯಾಗಿದ್ದು, 48,314 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಸಿಯಾಮ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾರು, ಬೈಕ್, ಮಾರಾಟ, ಸಿಯಾಮ್ ಏರಿಕೆ