ದೇಶದ ತೈಲೋದ್ಯಮ ಕಂಪೆನಿಗಳು ಶೀಘ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 2 ರೂಪಾಯಿ ಹೆಚ್ಚಳಗೊಳಿಸಲು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಎರಡು ತಿಂಗಳ ಗರಿಷ್ಠ, ಪ್ರತಿ ಬ್ಯಾರೆಲ್ ದರ 90 ಡಾಲರ್‌ಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ದೇಶಿಯ ತೈಲ ಕಂಪೆನಿಗಳು ದರವನ್ನು ಹೆಚ್ಚಿಸಲು ನಿರ್ಧರಿಸಿವೆ.
ಕೇಂದ್ರ ಸರಕಾರ ದರ ನಿಯಂತ್ರಣದ ಹೊಣೆಯನ್ನು ದೇಶಿಯ ತೈಲ ಕಂಪೆನಿಗಳಿಗೆ ವಹಿಸಿದ್ದರಿಂದ, ಪ್ರಸಕ್ತ ವರ್ಷದ ಜೂನ್ ತಿಂಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆ ಘೋಷಿಸಿದ್ದವು.
ಏತನ್ಮಧ್ಯೆ, ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರದಲ್ಲಿ ಶೇ.18ರಷ್ಟು ಏರಿಕೆಯಾಗಿತ್ತು.
ಶೇರುಪೇಟೆಯ ಇಂದಿನ ವಹಿವಾಟಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಶೇರುಗಳು ಶೇ.2.7ರಷ್ಟು ಏರಿಕೆ ಕಂಡಿದ್ದು, ಹಿಂದೂಸ್ತಾನ್ ಪೆಟ್ರೋಲೀಯಂ ಕಾರ್ಪೋರೇಶನ್ (ಶೇ.3.1) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಶೇ.2.4ರಷ್ಟು ಏರಿಕೆ ಕಂಡಿವೆ.