ನವೆಂಬರ್ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.26.8ರಷ್ಟು ಏರಿಕೆ
ನವದೆಹಲಿ, ಬುಧವಾರ, 8 ಡಿಸೆಂಬರ್ 2010( 15:32 IST )
ಭಾರತದ ರಫ್ತು ವಹಿವಾಟು ನವೆಂಬರ್ ತಿಂಗಳ ಅವಧಿಯಲ್ಲಿ ಶೇ.26.8ರಷ್ಟು ಹೆಚ್ಚಳವಾಗಿ 18.9 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 215 ಬಿಲಿಯನ್ ಡಾಲರ್ ರಫ್ತು ವಹಿವಾಟಿನ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ರಫ್ತು ವಹಿವಾಟು ಉತ್ತಮ ಚೇತರಿಕೆ ಕಂಡಿದೆ. ಮುಂಬರುವ ನಾಲ್ಕು ತಿಂಗಳುಗಳ ಅವಧಿಯಲ್ಲಿ 210-215 ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಖುಲ್ಲೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
2010-2011ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 200 ಬಿಲಿಯನ್ ಡಾಲರ್‌ಗಳ ರಫ್ತು ವಹಿವಾಟು ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ನವೆಂಬರ್ ತಿಂಗಳ ರಫ್ತು ವಹಿವಾಟಿಗಿಂತ ಮುಂಬರುವ ತಿಂಗಳುಗಳಲ್ಲಿ ರಫ್ತು ವಹಿವಾಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್‌ನಿಂದ ನವೆಂಬರ್ ತಿಂಗಳವರೆಗಿನ ಅವಧಿಯಲ್ಲಿ ದೇಶದ ಒಟ್ಟು ರಫ್ತು ವಹಿವಾಟು 140.3 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ನವೆಂಬರ್ ತಿಂಗಳ ಅವಧಿಯ ಅಮದು ವಹಿವಾಟಿನಲ್ಲಿ ಕೂಡಾ ಶೇ.11.2ರಷ್ಟು ಏರಿಕೆಯಾಗಿದ್ದು, 27.8 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಖುಲ್ಲೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.