ಆರ್ಥಿಕ ವರ್ಷದ ಆರಂಭಿಕ ಎಂಟು ತಿಂಗಳುಗಳ ಅವಧಿಯಲ್ಲಿ, ಕೇಂದ್ರದ ನೇರ ತೆರಿಗೆ ಸಂಗ್ರಹ ಶೇ.18 ರಷ್ಟು ಏರಿಕೆ ಕಂಡು 2,16,628 ಕೋಟಿ ರೂಪಾಯಿಗಳಿಗೆ ತಲುಪಿದೆ.
ಏಪ್ರಿಲ್-ನವೆಂಬರ್ ತಿಂಗಳುಗಳ ಅವಧಿಯಲ್ಲಿ, ನೇರ ತೆರಿಗೆ ಸಂಗ್ರಹ 2,16,628 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ 1,83,822 ಕೋಟಿ ರೂಪಾಯಿಗಳಾಗಿತ್ತು.
2010-11ರ ಆರ್ಥಿಕ ವರ್ಷದ ಅವಧಿಯಲ್ಲಿ, 4,30,000 ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಪೋರೇಟ್ ಕಂಪೆನಿಗಳ ಆದಾಯ ತೆರಿಗೆ ಸಂಗ್ರಹ, ಏಪ್ರಿಲ್-ನವೆಂಬರ್ ತಿಂಗಳ ಅವಧಿಯಲ್ಲಿ ಶೇ.22.3ರಷ್ಟು ಏರಿಕೆಯಾಗಿ 1,38,461 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,13,210 ಕೋಟಿ ರೂಪಾಯಿಗಳಿಗೆ ತಲುಪಿತ್ತು.