ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಕಿಲೀಕ್ಸ್‌: ಹ್ಯಾಕರ್ಸ್‌ಗಳಿಂದ ಮಾಸ್ಟರ್‌ಕಾರ್ಡ್‌ ಸೈಟ್‌ಗೆ ದಾಳಿ (WikiLeaks | Hackers | MasterCard)
Bookmark and Share Feedback Print
 
PTI
ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆಯವರನ್ನು ಜೈಲಿಗೆ ಕಳುಹಿಸಲು ಕಾರಣಿಭೂತರಾಗಿ, ಸೈಟ್ ವಿರುದ್ಧ ಕಾರ್ಯನಿರ್ವಹಿಸಿದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಹ್ಯಾಕರ್ಸ್‌ಗಳು ಸಮರವನ್ನು ಸಾರಿದ್ದಾರೆ.

ಮಾಸ್ಟರ್ ಕಾರ್ಡ್, ವೀಸಾ, ಸ್ವೀಡನ್‌ ನ್ಯಾಯಮೂರ್ತಿಗಳು, ಸ್ವಿಸ್ ಬ್ಯಾಂಕ್, ಸರಹಾ ಪಾಲಿನ್ ಸೇರಿದಂತೆ, ಇತರರ ವಿರುದ್ಧ ಹ್ಯಾಕರ್ಸ್‌ಗಳು ಸೈಬರ್ ದಾಳಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಟರ್‌ನೆಟ್ ಹ್ಯಾಕರ್‌ಗಳು ಆಪರೇಶನ್ ಪೇಬ್ಯಾಕ್ ಎನ್ನುವ ಹಣೆಪಟ್ಟಿಯಡಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ದಿನದಂದು ವಿಕಿಲೀಕ್ಸ್‌ನೊಂದಿಗೆ ಸಂಪರ್ಕ ಕಡಿದುಕೊಂಡ ಮಾಸ್ಟರ್‌ಕಾರ್ಡ್‌ ವೆಬ್‌ಸೈಟ್‌ಗೆ ಹಲವಾರು ತಾಂತ್ರಿಕ ತೊಂದರೆಗಳನ್ನು ಎದುರಿಸುವಂತೆ ಸೈಬರ್ ದಾಳಿ ನಡೆಸಿದ್ದಾಗಿ ಹ್ಯಾಕರ್‌ಗಳು ಟ್ವಿಟ್ಟರ್‌ನಲ್ಲಿ ಸಂದೇಶ ರವಾನಿಸಿದ್ದಾರೆ.

ಭದ್ರತಾ ಕೋಡ್ ವ್ಯವಸ್ಥೆಯಲ್ಲಿ ತೊಂದರೆಯುಂಟಾಗಿ ಸೇವೆ ಕಾರ್ಯಗಳಿಗೆ ಅಡ್ಡಿಯಾಗಿ ಆನ್‌ಲೈನ್ ಪಾವತಿಗಳನ್ನು ಪರಿಶೀಲಿಸಲು ಅಡ್ಡಿಯಾಗಿತ್ತು. ಆದರೆ, ಇವತ್ತಿಗೂ ಗ್ರಾಹಕರು ಸುರಕ್ಷಿತ ಹಣ ವರ್ಗಾವಣೆಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ ಎಂದು ಮಾಸ್ಟರ್‌ಕಾರ್ಡ್ ಕಂಪೆನಿಯ ವಕ್ತಾರ ಜೇಮ್ಸ್ ಐಸೊಕ್ಸನ್ ಹೇಳಿದ್ದಾರೆ.ಬುಧವಾರದ ನಂತರ ವೀಸ್ ವೆಬ್‌ಸೈಟ್ ಲಭ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಕಿಲೀಕ್ಸ್‌ ವೆಬ್‌ಸೈಟ್ ಬೆಂಬಲಿಸಲು ಆನ್‌ಲೈನ್ ದಾಳಿ ನಡೆಯುತ್ತಿದೆ. ಸೈಟ್‌‌ನ ಫೇಸ್‌‌ಬುಕ್ 1 ಮಿಲಿಯನ್ ಅಭಿಮಾನಿಗಳ ಗಡಿಯನ್ನು ದಾಟಿದೆ ಎಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಸಂದೇಶ ರವಾನಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ