ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.8.69ರಷ್ಟು ಏರಿಕೆ ಕಂಡ ಆಹಾರ ಹಣದುಬ್ಬರ ದರ (Food inflation | chief economic advisor Kaushik Basu)
Bookmark and Share Feedback Print
 
PTI
ಆಹಾರ ಹಣದುಬ್ಬರ ದರ ಹಿಂದಿನ ವಾರದ ಅವಧಿಯಲ್ಲಿ 18 ತಿಂಗಳ ಇಳಿಕೆ ಕಂಡು ಜನಸಾಮಾನ್ಯರು ನಿರಾಳತೆಯನ್ನು ಅನುಭವಿಸಿದ್ದರು. ಆದರೆ, ಇದೀಗ ನವೆಂಬರ್ 27ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಮತ್ತೆ ಶೇ.8.69ಕ್ಕೆ ಏರಿಕೆ ಕಂಡಿದೆ.

ಕಳೆದ ವಾರದ ಅವಧಿಯಲ್ಲಿ ಶೇ.8.60ಕ್ಕೆ ತಲುಪಿದ್ದ ಆಹಾರ ಹಣದುಬ್ಬರ ದರ,ಮೇ ತಿಂಗಳ ನಂತರ ಮೊದಲ ಬಾರಿಗೆ ಗರಿಷ್ಠ ಇಳಿಕೆ ಕಂಡಿತ್ತು.

ಆಹಾರ ದರಗಳಲ್ಲಿ ಅಲ್ಪ ಮಟ್ಟಿನ ಇಳಿಕೆ ಕಂಡಿದ್ದರಿಂದ ಸತತ ಏಳನೇ ವಾರದ ಅವಧಿಗೆ ಕುಸಿತ ಕಂಡಿದ್ದ ಆಹಾರ ಹಣದುಬ್ಬರ ದರ, ಇದೀಗ ಮತ್ತೆ ಏರಿಕೆಯತ್ತ ಸಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.20.24ಕ್ಕೆ ಏರಿಕೆ ಕಂಡಿತ್ತು ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಸಕ್ತ ವಾರದ ಅವಧಿಯಲ್ಲಿ ಭತ್ತದ ದರ ವಾರ್ಷಿಕ ಆಧಾರದನ್ವಯ ಶೇ.1.60ರಷ್ಟು ಏರಿಕೆ ಕಂಡಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದ ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿದಳ ಧಾನ್ಯಗಳ ದರಗಳಲ್ಲಿ ಕೂಡಾ ಶೇ.0.66ರಷ್ಟು ಏರಿಕೆಯಾಗಿದೆ.ಆಹಾರ ವಸ್ತುಗಳಾದ ಮೊಟ್ಟೆ, ಮಾಂಸ ಮತ್ತು ಮೀನು ಶೇ.16.16 ರಷ್ಟು ಏರಿಕೆಯಾಗಿದೆ.

ತರಕಾರಿ ಕ್ಷೇತ್ರದಲ್ಲಿ ಈರುಳ್ಳಿ ದರದಲ್ಲಿ ಶೇ.25.48 ರಷ್ಟು ಹೆಚ್ಚಳವಾಗಿದೆ. ಹಣ್ಣು ಮತ್ತು ಹಾಲಿನ ದರಗಳಲ್ಲಿ ಕ್ರಮವಾಗಿ ಷೇ.18.31ರಷ್ಟು ಮತ್ತು ಶೇ.17.76 ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ