ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟೆಲಿಕಾಂ : ಸಂಸದ ರಾಜೀವ್ ವಿರುದ್ಧ ಕಿಡಿಕಾರಿದ ರತನ್ ಟಾಟಾ (Ratan tata | Rajeev Chandrasekhar | Comptroller and auditor general)
ಕೇಂದ್ರದ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಜಿಎಸ್‌ಎಂ ಲಾಬಿದಾರರು ಪ್ರಯತ್ನಗಳನ್ನು ನಡೆಸುತ್ತಿದ್ದು, ರಾಜಕೀಯ ಒಳಸಂಚಿನಿಂದ ಕೂಡಿದೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಕಿಡಿಕಾರಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿರುವ 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆಯ ಮಧ್ಯೆಯು ಕೇಂದ್ರ ಸರಕಾರದ ಟೆಲಿಕಾಂ ನೀತಿಗಳನ್ನು ಬಹಿರಂಗವಾಗಿ ಬೆಂಬಲಿಸಿದ ಟಾಟಾ, ಟೆಲಿಕಾಂ ನೀತಿಗಳನ್ನು ಜಾರಿಗೆ ತಂದಿರುವುದು ಬಿಜೆಪಿ ಸರಕಾರ ಎನ್ನುವುದನ್ನು ನೆನಪಿಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಟಾಟಾ ಟೆಲಿಕಾಂ ಸಂಸ್ಥೆ ಕೇಂದ್ರ ಸರಕಾರದಿಂದ ಅತಿ ಹೆಚ್ಚಿನ ಲಾಭ ಪಡೆದ ಟೆಲಿಕಾಂ ಕಂಪೆನಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಟೆಲಿಕಾಂ ಉದ್ಯಮಿ ರಾಜೀವ್ ಚಂದ್ರಶೇಖರ್ ಟಾಟಾ ವಿರುದ್ಧ ಕೆಂಡ ಕಾರಿದ್ದಾರೆ.
ಮಾಜಿ ಟೆಲಿಕಾಂ ಸಚಿವ ಎ.ರಾಜಾ ಸೇರಿದಂತೆ ಇತರ ಯಾವುದೇ ಟೆಲಿಕಾಂ ಸಚಿವರಿಂದ ಟಾಟಾ ಟೆಲಿಸರ್ವಿಸಸ್ ನೆರವು ಪಡೆದಿಲ್ಲ ಎಂದು ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.