ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಜಿ ಸ್ಪೆಕ್ಟ್ರಂ ಹಂಚಿಕೆ ಅವ್ಯವಹಾರ ತನಿಖೆಗೆ ಏಕಸದಸ್ಯ ಸಮಿತಿ (2G spectrum | Probe | Government | Allocation)
Bookmark and Share Feedback Print
 
2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರ ಕುರಿತಂತೆ ತನಿಖೆಯನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಶಿವರಾಜ್ ಪಾಟೀಲ್ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಕೇಂದ್ರದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕಪಿಲ್ ಸಿಬಲ್ ಮಾತನಾಡಿ, ಏಕ ಸದಸ್ಯ ಸಮಿತಿ 2001-2009ರ ವರೆಗೆ 2ಜಿ ತರಂಗಾಂತರಗಳ ಹಂಚಿಕೆಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರದ ಟೆಲಿಕಾಂ ಇಲಾಖೆ 2ಜಿ ತರಂಗಾಂತರ ಹಂಚಿಕೆಗಾಗಿ ರೂಪಿಸಿದ ನಿಯಮಾವಳಿಗಳ ಲೋಪದೋಷಗಳ ಕುರಿತಂತೆ ಸಂಪೂರ್ಣವಾಗಿ ಅದ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಏಕಸದಸ್ಯ ಸಮಿತಿಗೆ ಕೋರಲಾಗಿದೆ ಎಂದು ಸಿಬಲ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ