ವರ್ಷಾಂತ್ಯದಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತವಾಗಿ 45.32 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 13 ಪೈಸೆ ಇಳಿಕೆ ಕಂಡು 45.21/22 ರೂಪಾಯಿಗಳಿಗೆ ತಲುಪಿತ್ತು.ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತವಾಗಿ 45.32 ರೂಪಾಯಿಗಳಿಗೆ ತಲುಪಿದೆ.
ವರ್ಷಾಂತ್ಯದಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 167.79 ಪಾಯಿಂಟ್‌ಗಳ ಕುಸಿತ ಕಂಡು 19,074.57 ಅಂಕಗಳಿಗೆ ತಲುಪಿದೆ.