ಕಳೆದ ಅಕ್ಟೋಬರ್ ತಿಂಗಳ ಅವದಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.10.8ಕ್ಕೆ ಏರಿಕೆ ಕಂಡಿದ್ದರಿಂದ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಜಿಡಿಪಿ ದರ ಏರಡಂಕಿಗೆ ತಲುಪುವ ವಿಶ್ವಾಸವಿದೆ ಎಂದು ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕೈಗಾರಿಕೆ ವೃದ್ಧಿ ದರದಲ್ಲಿ ಚೇತರಿಕೆಯಾಗಿರುವುದು ಉತ್ತೇಜನಕಾರಿ ಸಂಗತಿಯಾಗಿದೆ.ವರ್ಷಾಂತ್ಯದವರೆಗೆ ಇದೇ ರೀತಿ ಮುಂದುವರಿದಲ್ಲಿ ಕೈಗಾರಿಕೆ ವೃದ್ಧಿ ದರ ಎರಡಂಕಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಏಪ್ರಿಲ್-ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.10.3ಕ್ಕೆ ಏರಿಕೆ ಕಂಡಿದೆ. ದೇಶದ ಕೈಗಾರಿಕೋದ್ಯಮ, ಕೃಷಿ ಮತ್ತು ಸೇವಾ ಕ್ಷೇತ್ರಗಳ ವಹಿವಾಟಿನಲ್ಲಿ ಭಾರಿ ಚೇತರಿಕೆಯಾಗಿದೆ.ಇದೊಂದು ಆರೋಗ್ಯಕರ ಬೆಳವಣಿಗೆ ಎಂದರು.
2009ರ ಅವಧಿಯ ಏಪ್ರಿಲ್-ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.6.9ಕ್ಕೆ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.