ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ 2ಜಿ ನಿಯಮಗಳ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಅಪೆಕ್ಸ್ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಹಗರಣಗಳಿಗೆ ಬಿಜೆಪಿ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದೆ.
ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಕಡಿಮೆ ಅವಧಿಯಲ್ಲಿ ನಾಲ್ಕು ಟೆಲಿಕಾಂ ಸಚಿವರನ್ನು ಹೊಂದಿತ್ತು ಎನ್ನುವುದಕ್ಕೆ ಸರಕಾರ ಹೇಳಿಕೆ ನೀಡುವುದಿಲ್ಲ. ತನಿಖಾ ಸಂಸ್ಥೆಗಳು ಬಹಿರಂಗಗೊಳಿಸಲಿವೆ ಎಂದು ಕೇಂದ್ರದ ಟೆಲಿಕಾಂ ಖಾತೆ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.
2ಜಿ ತರಂಗಾಂತರಗಳ ಹಂಚಿಕೆ ನಿಯಮಗಳನ್ನು ಜಾರಿಗೆ ತಂದವನ್ನು ಬಿಜೆಪಿ ಪಕ್ಷದವರು,ಇದೀಗ ನಮ್ಮನ್ನೆ ಪ್ರಶ್ನಿಸುತ್ತಿರುವುದು ಯಾವ ನ್ಯಾಯ ಎಂದು ಸಿಬಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜನತೆಗೆ ಅನುಕೂಲವಾಗುವಂತಹ ಕೆಲ ಯೋಜನೆಗಳ ಘೋಷಣೆಗೆ ಸರಕಾರ ನಿರ್ಧರಿಸಿತ್ತು.ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ ಜನವಿರೋಧಿ ನೀತಿಯನ್ನು ತೋರಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.