ಭಾರತದ ವಿಮಾನಯಾನ ಮಾರುಕಟ್ಟೆ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಖಾಸಗಿ ವಿಮಾನಯಾನ ಸಂಸ್ಥೆಯಾದ ಸ್ಪೈಸ್ ಜೆಟ್ ಸಂಸ್ಥೆ ಬೊಂಬಾರ್ಡಿಯರ್ ವಿಮಾನ ತಯಾರಿಕೆ ಸಂಸ್ಥೆಗೆ 446 ಮಿಲಿಯನ್ ಡಾಲರ್ ಮೌಲ್ಯದ 15 ವಿಮಾನಗಳ ಬೇಡಿಕೆ ಸಲ್ಲಿಸಿದೆ ಎಂದು ಏರ್ಲೈನ್ ಮೂಲಗಳು ತಿಳಿಸಿವೆ.
ಕೆನಡಾ ಮೂಲದ ಬೊಂಬಾರ್ಡೈಯರ್ ಕಂಪೆನಿ, ದೇಶದ ಕೆಲ ವಿಮಾನಯಾನ ಸಂಸ್ಥೆಗಳಿಗೆ ಜೆಟ್ ವಿಮಾನಗಳನ್ನು ಪೂರೈಸಿದೆ. ಆದರೆ, ಮೊದಲ ಬಾರಿಗೆ 446 ಮಿಲಿಯನ್ ಡಾಲರ್ ಗುತ್ತಿಗೆಯನ್ನು ಪಡೆದಿದೆ.
ಮೊಂಟ್ರಿಯಲ್ ಮೂಲದ ಬೊಂಬಾರ್ಡಿಯರ್ ಕಂಪೆನಿ ಪ್ರಕಟಣೆಯೊಂದನ್ನು ಹೊರಡಿಸಿ, ಸ್ಪೈಸ್ ಜೆಟ್ ಕಂಪೆನಿ 15 ಜೆಟ್ ವಿಮಾನಗಳಿಗೆ ಬೇಡಿಕೆಯನ್ನು ಸಲ್ಲಿಸಿದೆ ಎಂದು ಮಾಹಿತಿ ಬಹಿರಂಗಪಡಿಸಿದೆ.