ಅಹ್ಮದಾಬಾದ್, ಶುಕ್ರವಾರ, 10 ಡಿಸೆಂಬರ್ 2010( 17:08 IST )
ರಾಜ್ಯದಲ್ಲಿ 18 ಲಶ್ರ ಜನತೆಗೆ ಉದ್ಯೋಗವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಗುಜರಾತ್ ಸರಕಾರ, ಇಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲು ಗುಜರಾತ್ ಸರಕಾರ ಗಮನಹರಿಸಿದೆ ಎಂದು ರಾಜ್ಯದ ಕೈಗಾರಿಕೆ ಇಲಾಖೆ ಆಯುಕ್ತ ಬಿ.ಬಿ.ಸ್ವೈನ್ ಹೇಳಿದ್ದಾರೆ.
ಭಾರತದ ಇಂಜಿನಿಯರಿಂಗ್ ವಸ್ತುಗಳ ರಫ್ತು ವಹಿವಾಟಿನಲ್ಲಿ ಶೇ.40ರಷ್ಟು ಪಾಲನ್ನು ಗುಜರಾತ್ ಹೊಂದಿದೆ.ರಾಜ್ಯದಲ್ಲಿ ಪ್ರಮುಖ ಉದ್ಯೋಗ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರ ಇಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿಗಾಗಿ 900 ಹೆಕ್ಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಟಾಟಾ ಮೋಟಾರ್ಸ್‌ನ ನ್ಯಾನೋ ಘಟಕವನ್ನು ಹೊಂದಿರುವ ಸನಂದ್ ಬಳಿ, ಇತರ ಕಂಪೆನಿಗಳು ಘಟಕಗಳನ್ನು ಸ್ಥಾಪಿಸಲು ತುದಿಗಾಲ ಮೇಲೆ ನಿಂತಿವೆ ಎಂದು ಸ್ವೈನ್ ಸಂತಸ ವ್ಯಕ್ತಪಡಿಸಿದ್ದಾರೆ.