ಸೀಗಡಿ ಮೀನು ಉತ್ಪಾದನೆಗಾಗಿ ಗುತ್ತಿಗೆ ಪದ್ದತಿಗಾಗಿ ಒಸಿಯಾನಾ, ಇಂಡಿಯನ್ ಒವರ್ಸೀಸ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಒಸಿಯಾನಾ ಸಂಸ್ಥೆ ಇಂಡಿಯನ್ ಒವರ್‌ಸೀಸ್ ಬ್ಯಾಂಕ್ ನೆರವಿನೊಂದಿಗೆ ತಮಿಳುನಾಡಿನಲ್ಲಿ ಕಳೆದ 2008ರಿಂದ ಗುತ್ತಿಗೆ ಕೃಷಿ ಪದ್ದತಿಯನ್ನು ಜಾರಿಗೊಳಿಸಿದ್ದು, ಇದೀಗ ಶ್ವೇತ ಬಣ್ಣದ ಸೀಗಡಿ ಮೀನು ಉತ್ಪಾದನೆಯತ್ತ ಗಮನಹರಿಸಿದೆ.
ಇಂಡಿಯನ್ ಒವರ್ಸೀಸ್ ಬ್ಯಾಂಕ್‌ನೊಂದಿಗೆ ಸೀಗಡಿ ಮೀನು ಉತ್ಪಾದನೆಗಾಗಿ ಕೃಷಿ ಗುತ್ತಿಗೆ ಆಧಾರಿತ ಪದ್ದತಿಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು ಕೃಷಿ ವೆಚ್ಚ ಪ್ರತಿ ಹೆಕ್ಟೇರ್‌ಗೆ 4,78,580 ರೂಪಾಯಿಗಳಾಗಲಿದ್ದು, ರೈತರಿಗೆ ಶೇ.15ರಷ್ಟು ಲಾಭವನ್ನು ನೀಡಲಾಗುತ್ತದೆ. ಅದಂರೆ, 71,787 ರೂಪಾಯಿಗಳ ಲಾಭವಾಗುತ್ತದೆ,ಬ್ಯಾಂಕ್ ಸಾಲ 4 ಲಕ್ಷ ರೂಪಾಯಿಗಳು ಬಾಕಿ ಉಳಿಯಲಿದ್ದು, ಆರು ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದಾಗಿದೆ ಎಂದು ಒಸಿಯಾನಾ ಅಧಿಕಾರಿಗಳು ತಿಳಿಸಿದ್ದಾರೆ.