ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಾಸನ್‌ ಐ-ಕೇರ್‌ನಿಂದ ವಿಪ್ರೋಗೆ 5 ವರ್ಷಗಳ ಐಟಿ ಗುತ್ತಿಗೆ (Wipro Infotech | IT outsourcing | Vasan Eye Care)
Bookmark and Share Feedback Print
 
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆ, ದೇಶದ ಐ-ಕೇರ್ ಸೆಂಟರ್‌ಗಳ ಬೃಹತ್ ಜಾಲವನ್ನು ಹೊಂದಿರುವ ವಾಸನ್ ಐ-ಕೇರ್ ಸಂಸ್ಥೆಯಿಂದ ಐದು ವರ್ಷಗಳ ಅವಧಿಯ ಐಟಿ ಹೊರಗುತ್ತಿಗೆಯನ್ನು ಪಡೆದಿದೆ ಎಂದು ವಿಪ್ರೋ ಮೂಲಗಳು ತಿಳಿಸಿವೆ.

ವಾಸನ್‌ ಹೆಲ್ತ್‌ ಕೇರ್ ಗ್ರೂಪ್‌ನ ಸಹೋದರ ಸಂಸ್ಥೆಯಾದ ವಾಸನ್ ಐ-ಕೇರ್ ಐಟಿ ಮೂಲಸೌಕರ್ಯಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಗಾಗಿ ಐದು ವರ್ಷಗಳ ಅವಧಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ವಾಸನ್ ಐ-ಕೇರ್ ಸಂಸ್ಥೆಯ ಸ್ವತಂತ್ರ ನಿರ್ವಹಣೆಯ 75 ಆಸ್ಪತ್ರೆಗಳಿದ್ದು, ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. ವಾರ್ಷಿಕವಾಗಿ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ವಾಸನ್ ಐ-ಕೇರ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ