ಐಷಾರಾಮಿ ಕಾರು ತಯಾರಿಕೆ ಸಂಸ್ಥೆ ಆಡಿ ಇಂಡಿಯಾ, ನವೆಂಬರ್ ತಿಂಗಳ ಅವಧಿಯಲ್ಲಿ 256 ಕಾರುಗಳ ಮಾರಾಟದಿಂದಾಗಿ ವಹಿವಾಟಿನಲ್ಲಿ ದ್ವಿಗುಣವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ನವೆಂಬರ್ ತಿಂಗಳ ಅವಧಿಯಲ್ಲಿ 101 ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಆಡಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಜನೆವರಿ-ನವೆಂಬರ್ ತಿಂಗಳ ಅವಧಿಯಲ್ಲಿ ಐಷಾರಾಮಿ ಕಾರುಗಳ ಮಾರಾಟದಲ್ಲಿ ಶೇ.80.06ರಷ್ಟು ಹೆಚ್ಚಳವಾಗಿ 2,791 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಜನೆವರಿ-ನವೆಂಬರ್ ತಿಂಗಳ ಅವಧಿಯಲ್ಲಿ 1,550 ಕಾರುಗಳನ್ನ ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ 1,658 ಕಾರುಗಳನ್ನು ಮಾರಾಟ ಮಾಡಿದ ಆಡಿ ಇಂಡಿಯಾ, ಪ್ರಸಕ್ತ ವರ್ಷಾಂತ್ಯಕ್ಕೆ 2,700 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.
ಕಳೆದ 11 ತಿಂಗಳ ಅವದಿಯಲ್ಲಿ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದು, ಡಿಸೆಬಂರ್ ತಿಂಗಳ ಅವಧಿಯಲ್ಲಿ ಕೂಡಾ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಆಡಿ ಇಂಡಿಯಾದ ಮುಖ್ಯಸ್ಥ ಮಿಚೈಲ್ ಪೆರ್ಶೆಕೆ ಹೇಳಿದ್ದಾರೆ.