ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಂಗ್‌ಫಿಶರ್‌ನಿಂದ 14 ವಿಮಾನಗಳ ಹೆಚ್ಚುವರಿ ಹಾರಾಟ (Kingfisher Airlines | Flights | Seven routes | Winter vacations)
Bookmark and Share Feedback Print
 
ಚಳಿಗಾಲದ ರಜೆಗಾಗಿ ತೆರಳುತ್ತಿರುವ ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸಲು ಡಿಸೆಬಂರ್ 15 ರಿಂದ ಹೆಚ್ಚುವರಿಯಾಗಿ 14 ವಿಮಾನಗಳನ್ನು ವಿವಿಧ ಭಾಗಗಳಿಗೆ ಸಂಚಾರ ಆರಂಭಿಸಲಿವೆ ಎಂದು ಖಾಸಗಿ ವಿಮಾನಯಾನ ಸಂಸ್ಥೆಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ನೂತನವಾಗಿ ಹೆಚ್ಚುವರಿ ವಿಮಾನಗಳ ಸಂಚಾರದಿಂದಾಗಿ ದೇಶದ ಮೆಟ್ರೋ ನಗರಗಳು ಸೇರಿದಂತೆ ಇತರ ಪ್ರಮುಖ ನಗರಗಳಿಗೆ ತಲುಪಲು ಸುಲಭವಾಗುತ್ತದೆ. ಹೆಚ್ಚುವರಿಯಾಗಿ ಆರಂಭಿಸುತ್ತಿರುವ 14 ವಿಮಾನಗಳ ಸಂಚಾರಕ್ಕೆ ಸೂಕ್ತ ಸಮಯವನ್ನು ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳಿ ಅದೇ ದಿನದಂದು ಮರಳಬಹುದಾಗಿದೆ ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಅಧ್ಯಕ್ಷ (ವಾಣಿಜ್ಯ) ಮನೋಜ್ ಚಾಕೋ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2010ರ ಚಳಿಗಾಲದಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗಾಗಿ, ಒಟ್ಟು ನೂತನ 36 ವಿಮಾನಗಳ ಸಂಚಾರ ಸೇವೆಯನ್ನು ಆರಂಭಿಸದಂತಾಗಿದೆ ಎಂದು ಚಾಕೋ ಹೇಳಿದ್ದಾರೆ.

ಪ್ರಸ್ತುತ, ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಗಳು ದೇಶಧ 59 ನಗರಗಳಿಗೆ ಸಂಚರಿಸುತ್ತಿದ್ದು, 8 ವಿಮಾನಗಳು ವಿದೇಶ ಸಂಚಾರಕ್ಕೆ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ