ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟೆಲಿಕಾಂ ಹಗರಣದಿಂದ ಹೂಡಿಕೆದಾರರ ನಿರಾಸಕ್ತಿ ಆತಂಕ:ಮೋದಿ (2G spectrum | Telecom row | Investor | Assocham)
Bookmark and Share Feedback Print
 
2ಜಿ ತರಂಗಾಂತರಗಳ ಹಂಚಿಕೆ ಹಗರಣ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದ್ದು, ಹಗರಣದಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆದಾರರು ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಭಾರತೀಯ ಕಾರ್ಪೋರೇಟ್ ಕಂಪೆನಿಗಳು ಆತಂಕ ವ್ಯಕ್ತಪಡಿಸಿವೆ.

ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್‌ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದೀಲಿಪ್ ಮೋದಿ ಮಾತನಾಡಿ, ಅನಿಶ್ಚಿತತೆ ದೇಶದ ಕೈಗಾರಿಕೋದ್ಯಮ ಚೇತರಿಕೆಗೆ ಅಡ್ಡಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಗರಣಗಳಿಂದಾಗಿ, ದೇಶದ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಬಯಸುವ ರಾಷ್ಟ್ರಗಳು ಹೂಡಿಕೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಸ್ಪೈಸ್ ಮೊಬೈಲ್‌ ಕಂಪೆನಿಯ ಮುಖ್ಯಸ್ಥರಾಗಿರುವ ಮೋದಿ, ಯಾವುದೇ ಉದ್ಯಮ ಹಗರಣದಲ್ಲಿ ಸಿಲುಕಿದಲ್ಲಿ, ಆಯಾ ಕ್ಷೇತ್ರದ ಶೇರುದಾರರು ಕೂಡಾ ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದ ಕೈಗಾರಿಕೋದ್ಯಮ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ