ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಮಧ್ಯೆ, ದರಗಳ ಏರಿಕೆಯಿಂದಾಗಿ ಕೈಗಾರಿಕೋದ್ಯಮಿಗಳು ಖರೀದಿಗೆ ನಿರಾಸಕ್ತಿ ತೋರಿದ್ದರಿಂದ, ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನ್ನದ ದರ ಪ್ರತಿ 10 ಗ್ರಾಂಗೆ 115 ರೂಪಾಯಿಗಳ ಕುಸಿತವಾಗಿ 20,705 ರೂಪಾಯಿಗಳಿಗೆ ತಲುಪಿತು.ಏತನ್ಮಧ್ಯೆ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 350 ರೂಪಾಯಿಗಳ ಕುಸಿತವಾಗಿ 43,900 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಕೈಗಾರಿಕೋದ್ಯಮಿಗಳು, ಹೂಡಿಕೆದಾರರು ಹಾಗೂ ಸಂಗ್ರಹಕಾರರು, ಚಿನ್ನ ಮತ್ತು ಬೆಳ್ಳಿಯ ಖರೀದಿಯಿಂದ ದೂರವಾಗಿದ್ದರಿಂದ ದರಗಳಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕೂಡಾ ಚಿನ್ನದ ದರ ಪ್ರತಿ ಔನ್ಸ್‌ಗೆ 1.20 ಡಾಲರ್‌ಗಳ ಕುಸಿತ ಕಂಡು 1,385.80 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ನಾಣ್ಯಗಳ (100 ನಾಣ್ಯಗಳು)ದರದಲ್ಲಿ ಕೂಡಾ ಇಳಿಕೆಯಾಗಿ 48,900 ರೂಪಾಯಿಗಳಿಗೆ ತಲುಪಿದೆ.