ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೆನ್ನೈನಲ್ಲಿ ವೈದ್ಯರ, ಶಸ್ತ್ರಜ್ಞರ ಸಮ್ಮೇಳನ ಉದ್ಘಾಟನೆ (Dental Conference | Pathologists | IAOMP)
Bookmark and Share Feedback Print
 
19ನೇ ನ್ಯಾಷನಲ್ ಆಂಡ್ ಫಸ್ಟ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆಫ್ ದಿ ಇಂಡಿಯನ್ ಅಸೋಸಿಯೇಶನ್ ಆಫ್ ಒರಲ್ ಆಂಡ್ ಮ್ಯಾಕ್ಸಿಲ್ಲೊಫಸಿಯಲ್ ಪ್ಯಾಥೋಲಾಜಿಸ್ಟ್ ಸಮ್ಮೇಳನವನ್ನು, ಸರಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಖ್ಯ ಅತಿಥಿಗಳಾದ ವಿ.ಕೆ.ಸುಬ್ಬರಾಜು ಉದ್ಘಾಟಿಸಿದರು.

ಗೌರವಾನ್ವಿತ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಇಲಾಖೆಯ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್, ಪ್ರೊಫೆಸರ್ ಡಾ.ಕನಕರಾಜ್, ಡಾ.ರಮೇಶ್ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನ ಡಿಸೆಂಬರ್ 10 ರಿಂದ 12ರ ವರೆಗೆ ನಡೆಯಲಿದ್ದು, ಆಸ್ಟ್ರೇಲಿಯಾ, ಥೈಲೆಂಡ್,ರಷ್ಯಾ, ಇಂಗ್ಲೆಂಡ್, ಹಾಂಗ್‌ಕಾಂಗ್, ಅಮೆರಿಕ, ಮೆಕ್ಸಿಕೊ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳಿಂದ ಸುಮಾರು 1000 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಹಲವಾರು ಅನುಭನಿ ವೈದ್ಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮ್ಮೇಳನದ ಆಯೋಜಕ ಸಮಿತಿಯ ಮುಖ್ಯಸ್ಥರಾದ ಡಾ.ಕೆ.ರಂಗನಾಥನ್ ಮಾತನಾಡಿ, ಸಮ್ಮೇಳನದಲ್ಲಿ ಶೈಕ್ಷಣಿಕ ಸೆಷನ್‌ಗಳು, ವೈಜ್ಞಾನಿಕ ವರದಿಗಳ ಮಂಡನೆ, ನುರಿತ ಅಂತಾರಾಷ್ಟ್ರೀಯ ವೈದ್ಯರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ