ಸಿಗರೇಟ್ ಪ್ಯಾಕ್ ಮೇಲೆ 'ತಂಬಾಕು ಸೇವನೆ ಅಪಾಯಕಾರಿ' ಎಂಬ ಎಚ್ಚರಿಕೆಯ ಚಿತ್ರಸಹಿತ ಸಂದೇಶ ಮುದ್ರಿಸಲು ಸರಕಾರ ಅಧಿಕೃತವಾಗಿ ಆದೇಶ ಹೊರಡಿಸಿದ ನಂತರವೇ ಸಿಗರೇಟ್ ಉತ್ಪಾದನೆ ಪುನರಾಂಭಿಸುವುದಾಗಿ ಐಟಿಸಿ ಲಿಮಿಟೆಡ್ ತಿಳಿಸಿದೆ.
ಎಚ್ಚರಿಕೆಯ ಚಿತ್ರಸಹಿತ ಸಂದೇಶ ಮುದ್ರಣದ ಆದೇಶ ಅಧಿಕೃತವಾಗಿ ಹೊರಬೀಳುವ ಕುರಿತ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಐಟಿಸಿ ಹಾಗೂ ಅದರ ವೈರಿ ಕಂಪನಿಗಳಾದ ಗಾಡ್‌ಪ್ರೈ ಫಿಲಿಫ್ಸ್ ಇಂಡಿಯ ಸಿಗರೇಟ್ ಉತ್ಪಾದನೆಯನ್ನು ನಿಲ್ಲಿಸಿವೆ.
'ಈ ಬಗ್ಗೆ ನಮಗೆ ಯಾವುದೇ ಉಪಾಯ ಹೊಳೆಯುತ್ತಿಲ್ಲ, ಆದರೂ ಶೀಘ್ರದಲ್ಲೇ ನೋಟಿಫಿಕೇಷನ್ ಬರಲಿದೆ. ಹಾಗಾಗಿ ನಾವು ಕೂಡ ಸಿಗರೇಟ್ ಉತ್ಪಾದನೆ ಆರಂಭಿಸುತ್ತೇವೆ.' ಎಂದು ಐಟಿಸಿ ಲಿಮಿಟೆಡ್ ಅಧ್ಯಕ್ಷ ವೈ.ಸಿ.ದೇವೇಶ್ವರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸಿಗರೇಟ್ ಮತ್ತು ಬಿಡಿ ಪ್ಯಾಕೇಟ್‌ಗಳಲ್ಲಿ ಚಿತ್ರ ಸಹಿತ ಎಚ್ಚರಿಕೆಯ ಸಂದೇಶ ಮುದ್ರಿಸುವ ನಿರ್ಣಯವನ್ನು ಸಂಸತ್‌ನಲ್ಲಿ ಮಂಗಳವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.