ದೇಶಿಯ ಮಾರುಕಟ್ಟೆಗಳಲ್ಲಿ ತೈಲ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದರಿಂದ, ಖಾದ್ಯ ತೈಲ ಅಮುದಿನಲ್ಲಿ ಶೇ.11ರಷ್ಟು ಕುಸಿತವಾಗಿ 6.68 ಲಕ್ಷಕ್ಕೆ ತಲುಪಿದೆ ಎಂದು ಕೈಗಾರಿಕೋದ್ಯಮ ಸಂಘಟನೆಯ ಮೂಲಗಳು ತಿಳಿಸಿವೆ.
ಕಳೆದ ವರ್ಷ ಬರಗಾಲ ಎದುರಾದ ಹಿನ್ನೆಲೆಯಲ್ಲಿ, ಖಾದ್ಯ ತೈಲ ಅಮುದು ವಹಿವಾಟು ಏರಿಕೆ ಕಂಡಿತ್ತು ಎಂದು ಸಾಲ್ವೆಂಟ್ ಎಕ್ಸಟ್ರಾಕ್ಟರ್ ಅಸೋಸಿಯೇಶನ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ವಿ.ಬಿ.ಮೆಹತಾ ತಿಳಿಸಿದ್ದಾರೆ.
ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದರಿಂದ, ತೈಲ ಉತ್ಪನ್ನಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ನವೆಂಬರ್ ತಿಂಗಳ ಅವಧಿಯಲ್ಲಿ 7.53 ಲಕ್ಷ ಟನ್ ಖಾದ್ಯತೈಲವನ್ನು ಅಮುದು ಮಾಡಿಕೊಳ್ಳಲಾಗಿತ್ತು ಎಂದು ಸಂಘಟನೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.