ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಿಮಾನ ಸೇವೆ (Middle East flights | Gulf flights | Air India)
Bookmark and Share Feedback Print
 
ಏರಿಂಡಿಯಾಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳು ಬೃಹತ್ ಹಾಗೂ ಪ್ರಮುಖವಾದ ಮಾರುಕಟ್ಟೆಯನ್ನು ಒದಗಿಸುತ್ತಿವೆ. ಆದ್ದರಿಂದ, ಇದೀಗ ಗಲ್ಫ್ ರಾಷ್ಟ್ರಗಳಿಂದ ಸೌಥ್-ಈಸ್ಟ್ ಏಷ್ಯಾ, ಕಾಠ್ಮಂಡು, ಶ್ರೀಲಂಕಾ, ಸಾರ್ಕ್ ರಾಷ್ಟ್ರಗಳು ಹಾಗೂ ನ್ಯೂಯಾರ್ಕ್ ವಾಯಾ ನವದೆಹಲಿ ಮೂಲಕ ಸಂಚಾರವನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯನ್ನು ಕೇಂದ್ರ ಕಚೇರಿಯನ್ನಾಗಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಗಲ್ಫ್ ರಾಷ್ಟ್ರಗಳಿಂದ ಇದೀಗ ವಾಯಾ ನವದೆಹಲಿ ಮೂಲಕ ಸೌಥ್-ಈಸ್ಟ್ ಏಷ್ಯಾ, ಕಾಠ್ಮಂಡು, ಶ್ರೀಲಂಕಾ, ಸಾರ್ಕ್ ರಾಷ್ಟ್ರಗಳು ಹಾಗೂ ನ್ಯೂಯಾರ್ಕ್‌ಗಳಿಗೆ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಏರಿಂಡಿಯಾ ಪ್ರಾದೇಶಿಕ ವ್ಯವಸ್ಥಾಪಕ ಅಭಯ್ ಪಾಠಕ್ ಹೇಳಿದ್ದಾರೆ.

ದುಬೈಯಲ್ಲಿ ನಡೆದ 2009-10ರ ಅವಧಿಯ ವಾರ್ಷಿಕ ಏಜೆನ್ಸಿ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಠಕ್ ಭಾಗವಹಿಸಿ ಮಾತನಾಡುತ್ತಿದ್ದರು.

ಏರಿಂಡಿಯಾ ವಿಮಾನಯಾನ ಸಂಸ್ಥೆ, ಇತರ ಭಯೋತ್ಪಾನೆ ಪೀಡಿತ ರಾಷ್ಟ್ರಗಳಿಗೆ ಕೂಡಾ ಸಂಪರ್ಕಿಸುವ ಪ್ರಯತ್ನ ಮುಂದುವರಿದಿದೆ ಎಂದು ಪಾಠಕ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ