ಬಹ್ವಾನ್ ಸೈಬರ್ ಟೆಕ್‌ನಿಂದ ಇ-ಪೇಮೆಂಟ್ ಸಲ್ಯೂಶನ್ ವ್ಯವಸ್ಥೆ
ಚೆನ್ನೈ, ಸೋಮವಾರ, 13 ಡಿಸೆಂಬರ್ 2010( 19:26 IST )
PTI
ಐಟಿ ಉತ್ಪನ್ನ ಹಾಗೂ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ನಗರದ ಬಹ್ವಾನ್ ಸೈಬರ್ ಟೆಕ್(ಬಿಸಿಟಿ),ಬಿಜಿನೆಸ್, ಬ್ಯಾಂಕಿಂಗ್, ಸರಕಾರಿ, ಇಂಧನ್ ಮತ್ತು ಅನುಸಾಧನಗಳು ಹಾಗೂ ವಿತರಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಹಾಗೂ ನಿರ್ದೇಶಕ ಎಸ್.ದುರ್ಗಾಪ್ರಸಾದ್ ಮಾತನಾಡಿ, ಕಳೆದ 11 ವರ್ಷಗಳ ಅವಧಿಯಲ್ಲಿ ಜಾಗತಿಕ ಮಟ್ಟದ ಹಲವಾರು ಕಂಪೆನಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಇ-ಪೇ 2.0(ಇಂಟಿಗ್ರೇಟೆಡ್ ಪೇಮೆಂಟ್) ಅತ್ಯಾಧುನಿಕ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಸರಕಾರಗಳು, ಬ್ಯಾಂಕ್‌ಗಳು, ವಿಮಾ ಉದ್ಯಮಗಳಿಗೆ ಅಗತ್ಯವಾದ ಕಾರ್ಯವನ್ನು ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಂಪೆನಿಯ ಸಂಶೋಧನಾ ಮತ್ತು ಅಭಿವೃದ್ಧಿಯ ವಿಭಾಗದಲ್ಲಿರುವ ನುರಿತ, ಅನುಭವಿ ಇಂಜಿನಿಯರ್‌ಗಳ ಪರಿಶ್ರಮವಾಗಿದೆ. ಎಲೆಕ್ಟ್ರಾನಿಕ್ ಪೇಮೆಂಟ್ ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಜಿಪ್ತ್ ಸರಕಾರ ಇ-ಪೇಮೆಂಟ್ ಮೂಲಕ 7 ಮಿಲಿಯನ್ ಪಿಂಚಿಣಿ ಹಣ ಪಾವತಿ ಹಾಗೂ 6 ಮಿಲಿಯನ್ ವೇತನ ಪಾವತಿ ಮತ್ತು ಮಿಲಿಯನ್‌ಗಟ್ಟಲೆ ತೆರಿಗೆ ಹಾಗೂ ಗ್ರಾಹಕರ ವಾರ್ಷಿಕ ಹಣ ವರ್ಗಾವಣೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
ಬಿಸಿಟಿ ಕಂಪೆನಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 475 ಕೋಟಿ ರೂಪಾಯಿಗಳ ವಹಿವಾಟಿನ ಗುರಿಯನ್ನು ಹೊಂದಿದೆ. ಮುಂದಿನ ವರ್ಷದ ಅವಧಿಯಲ್ಲಿ ಶೇ.100ರಷ್ಟು ವಹಿವಾಟು ಹೆಚ್ಚಳದ ಗುರಿಯನ್ನು ಹೊಂದಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನಿರ್ದೇಶಕ ಎಸ್.ದುರ್ಗಾಪ್ರಸಾದ್ ತಿಳಿಸಿದ್ದಾರೆ.