ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇನಾ ಬ್ಯಾಂಕ್‌ನಿಂದ ಮೂಲ ಬಡ್ಡಿ ದರ ಹೆಚ್ಚಳ ಘೋಷಣೆ (Dena Bank | Base rate | BPLR | Raises)
Bookmark and Share Feedback Print
 
ಸಾರ್ವಜನಿಕ ಕ್ಷೇತ್ರದ ದೇನಾ ಬ್ಯಾಂಕ್, ಮೂಲ ಬಡ್ಡಿ ದರದಲ್ಲಿ ಶೇ. 0.50ರಷ್ಟು ಏರಿಕೆ ಘೋಷಿಸಿದ್ದು, ಬಿಪಿಎಲ್‌ಆರ್ ದರದಲ್ಲಿ ಶೇ.25ರಷ್ಟು ಹೆಚ್ಚಳಗೊಳಿಸಿದೆ ಎಂದು ಬ್ಯಾಂಕ್‌‌ ಮೂಲಗಳು ತಿಳಿಸಿವೆ.

ಬ್ಯಾಂಕ್ ಮೂಲಗಳ ಪ್ರಕಾರ, ಪರಿಷ್ಕ್ರತ ದರದಿಂದಾಗಿ ಬಡ್ಡಿ ದರ ಶೇ.8.95ಕ್ಕೆ ತಲುಪಿದ್ದು, ಬಿಪಿಎಲ್‌ಆರ್ ದರ ಶೇ.13.75ಕ್ಕೆ ಏರಿಕೆಯಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್, ವಿವಿಧ ರೀತಿಯ ಸ್ಥಿರ ಠೇವಣಿಗಳ ಬಡ್ಡಿ ದರಗಳಲ್ಲಿ ಶೇ.1.50ರಷ್ಟು ಹೆಚ್ಚಳಗೊಳಿಸಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

121-179 ದಿನಗಳ ಠೇವಣಿಗೆ ವಾರ್ಷಿಕವಾಗಿ ಶೇ.7ರಂತೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಮೊದಲು ಶೇ.5.50 ಬಡ್ಡ ದರವನ್ನು ನೀಡಲಾಗುತ್ತಿತ್ತು.

180-270 ದಿನಗಳು ಹಾಗೂ 271-364 ದಿನಗಳ ಅವಧಿಗೆ ಶೇ.7.50ರಂತೆ ಸಮಾನ ಬಡ್ಡ ದರವನ್ನು ನೀಡಲಾಗುತ್ತದೆ. ಇದಕ್ಕಿಂತ ಮೊದಲು ಶೇ.6.50 ಬಡ್ಡಿ ದರವನ್ನು ನಿಗದಿಪಡಿಸಲಾಗಿತ್ತು ಎಂದು ದೇನಾ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ