ಕೈಗಾರಿಕೋದ್ಯಮ ಹಾಗೂ ನಾಣ್ಯಗಳ ತಯಾರಕ ಕಂಪೆನಿಗಳಿಂದ ಬೆಳ್ಳಿ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿ ದರದಲ್ಲಿ ಪ್ರತಿ ಕೆಜಿಗೆ 1,100 ರೂಪಾಯಿಗಳ ಏರಿಕೆಯಾಗಿ 45,400 ರೂಪಾಯಿಗಳಿಗೆ ತಲುಪಿದೆ.
ಮದುವೆ ಸೀಜನ್ ಹಾಗೂ ಹೂಡಿಕೆದಾರರ ಚಿನ್ನದ ಖರೀದಿಯಿಂದಾಗಿ, ಚಿನ್ನದ ದರದಲ್ಲಿ ಕೂಡಾ ಪ್ರತಿ 10 ಗ್ರಾಂಗೆ 125 ರೂಪಾಯಿಗಳ ಏರಿಕೆಯಾಗಿ 20,895 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ನಾಣ್ಯಗಳ(100 ನಾಣ್ಯಗಳು) ದರದಲ್ಲಿ ಕೂಡಾ 400 ರೂಪಾಯಿಗಳ ಏರಿಕೆಯಾಗಿ 49,400 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಪರಿಪೂರ್ಣ ಚಿನ್ನದ ದರದಲ್ಲಿ ಕೂಡಾ ಪ್ರತಿ 10 ಗ್ರಾಂಗೆ 125 ರೂಪಾಯಿಗಳ ಏರಿಕೆಯಾಗಿ, 20,895 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.6 ಸೆಂಟ್‌ಗಳಷ್ಟು ಹೆಚ್ಚಳವಾಗಿ 1,402.32 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.