ಆಹಾರ ದರಗಳಲ್ಲಿ ಇಳಿಕೆಯಾಗುತ್ತಿರುವುದರಿಂದ ಹಣದುಬ್ಬರ ದರ 11 ತಿಂಗಳ ಗರಿಷ್ಠ ಇಳಿಕೆ ಕಂಡು ಶೇ.7.48ಕ್ಕೆ ಇಳಿಕೆಯಾಗಿದ್ದರಿಂದ, ಆರ್‌ಬಿಐ ರೆಪೋ ದರಗಳಲ್ಲಿ ಕಡಿತಗೊಳಿಸುವ ಸಾಧ್ಯತೆಗಳ ದೂರವಾಗಿವೆ.
ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ.6ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿದ್ದು,ರಿಸರ್ವ್ ಬ್ಯಾಂಕ್ ಶೇ.5.5ರಷ್ಟು ಗುರಿಯನ್ನು ಹೊಂದಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಹಣದುಬ್ಬರ ದರ ಆರ್ಥಿಕ ವರ್ಷಾಂತ್ಯಕ್ಕೆ ಶೇ.6ಕ್ಕೆ ಇಳಿಕೆಯಾಗಲಿರುವುದರಿಂದ, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಳೆದ 2009ರ ಡಿಸೆಂಬರ್ ಅವಧಿಯಲ್ಲಿ ಹಣದುಬ್ಬರ ದರ ಶೇ.7.31ಕ್ಕೆ ತಲುಪಿತ್ತು.
ಕೇಂದ್ರದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮಾತನಾಡಿ, ಪ್ರಸ್ತುತ ಹಣದುಬ್ಬರ ದರದಲ್ಲಿ ಸುಧಾರಣೆಯಾಗಿದ್ದು, ಇದೀಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.