ಚೆನ್ನೈ: ಡೀಸೆಲ್ ಆವೃತ್ತಿಯ ನಿಸಾನ್ ಮೈಕ್ರಾ ಕಾರು ಮಾರುಕಟ್ಟೆಗೆ
ಚೆನ್ನೈ, ಮಂಗಳವಾರ, 14 ಡಿಸೆಂಬರ್ 2010( 20:32 IST )
PTI
ನಿಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎನ್‌ಎಂಐಪಿಎಲ್) ಪೆಟ್ರೋಲ್ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಯಶಸ್ವಿಯಾದ ನಂತರ ಇದೀಗ ಡೀಸೆಲ್ ಆವೃತ್ತಿಯ ಮೈಕ್ರಾ ಮಾಡೆಲ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಚೆನ್ನೈನಲ್ಲಿರುವ ಕಂಪೆನಿಯ ಅಧಿಕೃತ ಡೀಲರ್‌ಶಿಪ್‌ನ 'ಶೆರಿಫ್ ನಿಸಾನ್' ಶೋರೂಂನಲ್ಲಿ 'ಮೈಕ್ರಾ'ಮಾಡೆಲ್ ಕಾರನ್ನು ಇಂದಿನಿಂದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಿಮಿನೊಬು ಟೊಕುಯಾಮಾ, ಉಪಾಧ್ಯಕ್ಷ ಸತೋಷಿ ಮಟುಸುಟೊಮಿ, ಹೊವೆರ್ ಅಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಐ) ದಿನೇಶ್ ಜೈನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ನಿಸಾನ್ ಮೈಕ್ರಾ ಡೀಸೆಲ್ ಮಾಡೆಲ್ ಕಾರಿನ ವಿನ್ಯಾಸ ಅದ್ಭುತವಾಗಿದ್ದು, ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿದ್ದು, ನಗರದ ರಸ್ತೆಗಳಿಗೆ ಸೂಕ್ತವಾಗಿದೆ. ಪ್ರತಿ ಲೀಟರ್‌ಗೆ 23.08 ಕಿ.ಮೀಟರ್ ದೂರವನ್ನು ಕ್ರಮಿಸಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಡೀಸೆಲ್ ಆವೃತ್ತಿಯ ನಿಸಾನ್ ಮೈಕ್ರಾ ಮಾಡೆಲ್ ಕಾರು ಎಕ್ಸ್‌ವಿ ಮತ್ತು ಎಕ್ಸ್‌ವಿ(ಪ್ರೀಮಿಯಂ) ಎರಡು ವಿಧಗಳಲ್ಲಿ ಆರು ಬಣ್ಣಗಳಲ್ಲಿ ದೊರೆಯಲಿದೆ. ಸನ್‌ಲೈಟ್, ಆರೇಂಜ್, ಬ್ರಿಕ್ ರೆಡ್, ಪೆಸಿಫಿಕ್ ಬ್ಲ್ಯೂ ಸ್ಟಾರ್ಮ್ ವೈಟ್ ಬ್ಲೇಡ್ ಸಿಲ್ವರ್ ಮತ್ತು ಒನಿಕ್ಸ್ ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯಲಿದ್ದು, ಎಕ್ಸ್‌ವಿ ದರ 5,58,500 ರೂಪಾಯಿಗಳ ದರವನ್ನು ನಿಗದಿಪಡಿಸಿದ್ದು, ಎಕ್ಸ್‌ವಿ ಪ್ರೀಮಿಯಂ ಮಾಡೆಲ್ ದರ 6,04,500 ರೂಪಾಯಿಗಳನ್ನು ನಿಗದಿಪಡಿಸಿದೆ.
ಮೈಕ್ರಾ ಮಾಡೆಲ್ ಕಾರು 1.5 ಲೀಟರ್‌ನ ಕೆ9ಕೆ ಡೀಸೆಲ್ ಇಂಜಿನ್ ಹೊಂದಿದೆ. 4 ಸಿಲಿಂಡರ್ ಡೀಸೆಲ್ ಇಂಜಿನ್‌ನೊಂದಿಗೆ 5 ಗೇಯರ್‌ಗಳನ್ನು ಹೊಂದಿದೆ. ಭಾರತದ ರಸ್ತೆಗಳಿಗೆ ಅನುಗುಣದಂತೆ ಕಾರನ್ನು ವಿನ್ಯಾಸ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿಮಿನೊಬು ಟೊಕುಯಾಮೊ ಮಾತನಾಡಿ, ಮೈಕ್ರಾ ಪೆಟ್ರೋಲ್ ಆವೃತ್ತಿಯ ಯಶಸ್ವಿನಿಂದಾಗಿ, ಡೀಸೆಲ್ ಆವೃತ್ತಿಯನ್ನು ಹೊರತರಲು ಆತ್ಮವಿಶ್ವಾಸ ಹೆಚ್ಚಾಗಿದೆ.ಮೈಕ್ರಾ ಕಾರು ಅತ್ಯುತ್ತಮ ಇಂಧನ ಸಾಮರ್ಥ್ಯ,ವಿಶಿಷ್ಠ ಗುಣಲಕ್ಷಣಗಳನ್ನು ಹೊಂದಿದೆ. ದೇಶಿಯ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊವೆರ್ ಅಟೋಮೋಟಿವ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ್ ಜೈನ್ ಮಾತನಾಡಿ, ಮೈಕ್ರಾ ಪೆಟ್ರೋಲ್ ಆವೃತ್ತಿಯನ್ನು ಹೊರ ತಂದ ನಂತರ ಗ್ರಾಹಕರಿಂದ ಡೀಸೆಲ್ ಆವೃತ್ತಿಯನ್ನು ಬಿಡುಗಡೆಗೊಳಿಸುವಂತೆ ಒತ್ತಡಗಳು ಬಂದಿದ್ದವು.ಡೀಸೆಲ್ ಆವೃತ್ತಿಯ ಮೈಕ್ರಾ ಗ್ರಾಹಕರ ಹಣಕ್ಕೆ ತಕ್ಕಂತೆ ಅತ್ಯುನ್ನತ ಮಾಡೆಲ್ ಕಾರು ಪರಿಚಯಿಸಲಾಗುತ್ತದೆ. ಕಾರು ಮಾರುಕಟ್ಟೆಗೆ ಬಿಡುಗಡೆಗೆ ಮುನ್ನ ಬುಕ್ಕಿಂಗ್ ಆರಂಭವಾಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಬ್ರಾಂಡ್ ಅಂಬಾಸಿಡರ್ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಕಳೆದ ಜುಲೈ ತಿಂಗಳ ಅವಧಿಯಲ್ಲಿ ನಿಸಾನ್ ಮೋಟಾರ್ಸ್, ಚೆನ್ನೈನ ಒರಗಾಡಮ್‌ನಲ್ಲಿರುವ ಘಟಕದಲ್ಲಿ ಮೈಕ್ರಾ ಪೆಟ್ರೋಲ್ ಆವೃತ್ತಿಯನ್ನು ಹೊರತಂದಿತ್ತು. 2010ರ ಜುಲೈ 15ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಇಲ್ಲಿಯವರೆಗೆ ಸುಮಾರು 6000 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.