2ಜಿ ತರಂಗಾಂತರಗಳ ಹಂಚಿಕೆಯಲ್ಲಿ ಲಾಬಿ ನಡೆಸಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರದ ತನಿಖಾ ದಳ ಲಾಬಿಗಾರ್ತಿ ನಿರಾ ರಾಡಿಯಾ ಸೇರಿದಂತೆ ರಾಜಧಾನಿ ನವದೆಹಲಿ ಮತ್ತು ತಮಿಳುನಾಡು ಸೇರಿದಂತೆ 30 ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.
ನಿರಾ ರಾಡಿಯಾಗೆ ಸೇರಿದಂತೆ ಹಲವು ಕಂಪೆನಿಗಳ ಮೇಲೆ ಇಂದು ಬೆಳಿಗ್ಗೆ 7 ಗಂಟೆಗೆ ಹಲವು ಸಿಬಿಐ ಅಧಿಕಾರಿಗಳನ್ನೊಳಗೊಂಡ ತಂಡಗಳು ದಾಳಿಯನ್ನು ಆರಂಭಿಸಿದವು ಎಂದು ಮೂಲಗಳು ತಿಳಿಸಿವೆ.
ಛತ್ತರ್‌ಪುರ್‌ನಲ್ಲಿರುವ ರಾಡಿಯಾ ಫಾರ್ಮ್‌ಹೌಸ್ ಹಾಗೂ ಬಾರಾಕಂಭಾ ರಸ್ತೆಯಲ್ಲಿರುವ ಅವರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು. ಕೆಲ ವರ್ಷಗಳ ಅವಧಿಯಲ್ಲಿ 300 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಬಗ್ಗೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಾ ರಾಡಿಯಾ, ಹವಾಲಾ ಹಗರಣದಲ್ಲಿ ಭಾಗಿಯಾಗಿರುವ ಸಾಧ್ಯತೆಗಳ ಬಗ್ಗೆ ಕೂಡಾ ಅಧಿಕಾರಿಗಳು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.