ತೈಲ ದರಗಳ ಏರಿಕೆ ಮುಗಿಯುವಂತೆ ಕಾಣುತ್ತಿಲ್ಲ. ತೈಲ ಕಂಪೆನಿಗಳು ಪೆಟ್ರೋಲ್ ದರ ಏರಿಕೆಯನ್ನು ಈಗಾಗಲೇ ಘೋಷಿಸಿದ್ದು. ಇದೀಗ ಜೆಟ್ ಇಂಧನ ದರಗಳಲ್ಲಿ ಕೂಡಾ ಶೇ.3.6ರಷ್ಟು ಹೆಚ್ಚಳವನ್ನು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಘೋಷಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದಾಗಿ, ಜೆಟ್ ಇಂಧನ ದರದಲ್ಲಿ ಶೇ.3.6ರಷ್ಟು ಹೆಚ್ಚಳವಾಗಿದ್ದು, ಪರ್ತಿ ಕೀಲೋ ಲೀಟರ್‌ಗೆ 46,876.58 ರೂಪಾಯಿಗಳಿಗೆ ತಲುಪಿದೆ.
ಏವಿಯೇಶನ್ ಟರ್ಬೈನ್ ಫ್ಯೂಲ್ ದರ, ದೆಹಲಿಯಲ್ಲಿ ಪ್ರತಿ ಕಿ.ಲೀಗೆ1,636.58 ರೂಪಾಯಿಗಳಿಗೆ ತಲುಪಿದೆ. ಇಂದು ಮಧ್ಯ ರಾತ್ರಿಯಿಂದ ದರ ಏರಿಕೆ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಏರಿಕೆಯಿಂದಾಗಿ, ಕಳೆದ ಡಿಸೆಂಬರ್ 1 ರಂದು ಜೆಟ್ ಇಂಧನ ದರದಲ್ಲಿ ಶೇ.1.4ರಷ್ಟು ದರ ಹೆಚ್ಚಳವನ್ನು ಘೋಷಿಸಿತ್ತು. ನವೆಂಬರ್ ತಿಂಗಳಲ್ಲಿ ಶೇ.1.4ರಷ್ಟು ದರ ಹೆಚ್ಚಳವಾಗಿತ್ತು.
ಐಒಸಿ ದರ ಏರಿಕೆಯ ನಂತರ ಸಹೋದರ ಸಂಸ್ಥೆಗಳಾದ, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಕೂಡಾ ದರ ಏರಿಕೆಯನ್ನು ಘೋಷಿಸಿವೆ.