ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜನೆವರಿಯಿಂದ ಪ್ರಯಾಣಿಕ ಕಾರುಗಳ ದರ ಏರಿಕೆ:ಟಾಟಾ (Tata Motors | Nano | Aria)
Bookmark and Share Feedback Print
 
PTI
ದೇಶದ ವಾಹನೋದ್ಯಮ ಕ್ಷೇತ್ರದ ಚೇತರಿಕೆಯಿಂದಾಗಿ, ಕಾರುಗಳ ದರ ಏರಿಕೆ ಮುಂದುವರಿದಿದೆ. ನ್ಯಾನೋ ಮತ್ತು ಆರಿಯಾ ಮಾಡೆಲ್ ಕಾರುಗಳನ್ನು ಹೊರತುಪಡಿಸಿ, ಮುಂದಿನ ತಿಂಗಳಿನಿಂದ ಇತರ ಮಾಡೆಲ್‌ಗಳ ಕಾರು ದರಗಳಲ್ಲಿ ಶೇ.1.5ರಷ್ಟು ಹೆಚ್ಚಳಗೊಳಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ, ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುತ್ತಿರುವುದರಿಂದ, ಇತರ ಮಾಡೆಲ್‌ ಕಾರುಗಳ ದರವನ್ನು ಹೆಚ್ಚಳಗೊಳಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಜನೆವರಿ ತಿಂಗಳಿನಿಂದ ಪ್ರಯಾಣಿಕ ವಾಹನಗಳ ದರಗಳಲ್ಲಿ ಶೇ. 1-1.5ರಷ್ಟು ಹೆಚ್ಚಳ ಘೋಷಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಉಪಾಧ್ಯಕ್ಷ ಆರ್.ರಾಮಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನ್ಯಾನೋ ಮತ್ತು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾದ ಆರಿಯಾ ಮಾಡೆಲ್‌ ಕಾರುಗಳನ್ನು ಹೊರತುಪಡಿಸಿ, ಇತರ ಮಾಡೆಲ್‌ ಕಾರುಗಳ ದರದಲ್ಲಿ ಏರಿಕೆ ಘೋಷಿಸಲಾಗಿದೆ.

ಹುಂಡೈ ಮೋಟಾರ್ ಇಂಡಿಯಾ, ವೊಕ್ಸ್‌ವಾಗೆನ್ ಮತ್ತು ಜನರಲ್ ಮೋಟಾರ್ಸ್ ಕಂಪೆನಿಗಳು ಕೂಡಾ ಶೀಘ್ರದಲ್ಲಿ ದರ ಏರಿಕೆ ಘೋಷಿಸುವುದಾಗಿ ಹೇಳಿಕೆ ನೀಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಟಾ ಮೋಟಾರ್ಸ್, ನ್ಯಾನೋ, ಆರಿಯಾ