ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕ್ರಿಸ್‌ಮಸ್: ತರಕಾರಿ, ಹಣ್ಣು ದರಗಳಲ್ಲಿ ಭಾರಿ ಏರಿಕೆ (Vinod Rai | Panaji market | Orlando Rodrigues | Goa State Horticulture Corporation)
Bookmark and Share Feedback Print
 
ಅಕಾಲಿಕ ಮಳೆಯಿಂದಾಗಿ ಅಗತ್ಯ ಆಹಾರ ವಸ್ತುಗಳ ದರಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕ್ರಿಸ್‌ಮಸ್‌ಗೆ ಕೆಲ ದಿನಗಳಿರುವಂತೆ ಈರುಳ್ಳಿ ದರ ಪ್ರತಿ ಕೆಜಿಗೆ 40 ರೂಪಾಯಿಗಳಿಗೆ ಏರಿಕೆಯಾಗಿದೆ.

ಪಣಜಿ ಮಾರುಕಟ್ಟೆಯ ವರ್ತಕ ವಿನೋದ್ ರೈ ಮಾತನಾಡಿ, ಮುಂಬರುವ ದಿನಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 45-50 ರೂಪಾಯಿಗಳಿಗೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.

ಕೃಷಿ ಅಧಿಕಾರಿ ಒರ್ಲಾಂಡೊ ರೊಡಿಗ್ವೆಸ್ ಪ್ರಕಾರ, ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದಾಗಿ ತರಕಾರಿ, ಹಣ್ಣುಗಳ ಸರಬರಾಜಿನಲ್ಲಿ ಕೊರತೆಯಾಗಿದ್ದರಿಂದ ದರಗಳಲ್ಲಿ ಏರಿಕೆಯಾಗಿವೆ.

ಏತನ್ಮಧ್ಯೆ, ದ್ವಿದಳ ಧಾನ್ಯಗಳ ದರಗಳು ಸ್ಥಿರವಾಗಿವೆ. ಮೊಟ್ಟೆ ದರ ಪ್ರತಿ ಡಜನ್‌ಗೆ 36 ರೂಪಾಯಿಗಳಿಂದ 40 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ