ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನಾದಲ್ಲಿ ವಹಿವಾಟು ವಿಸ್ತರಣೆಗೆ ಟಾಟಾ ಗ್ರೂಪ್ ಚಿಂತನೆ (Tata Group | Wen Jiabao | Expand | Businesses)
Bookmark and Share Feedback Print
 
ಭಾರತೀಯ ಕಂಪೆನಿಗಳ ವಹಿವಾಟಿಗೆ ಅಡ್ಡಿಯಾಗಿರುವ ನಿಯಮಗಳನ್ನು ಹಿಂಪಡೆಯುವುದಾಗಿ ಚೀನಾದ ಪ್ರಧಾನಿ ವೆನ್‌ ಜಿಯಾಬೊ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಟಾಟಾ ಗ್ರೂಪ್ ಸಂಸ್ಥೆ ಚೀನಾದಲ್ಲಿ ವಹಿವಾಟು ವಿಸ್ತರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದಲ್ಲಿ ಕಳೆದ ವರ್ಷ ಟಾಟಾ ಗ್ರೂಪ್ ಸಂಸ್ಥೆ 4 ಬಿಲಿಯನ್ ಡಾಲರ್ ವಹಿವಾಟು ನಡೆಸಿದ್ದು, ಚೀನಾದ ವಹಿವಾಟು ಕ್ಷೇತ್ರದಲ್ಲಿ ಶೇ.4ರಷ್ಟು ಪಾಲನ್ನು ಹೊಂದಿದೆ ಎಂದು ಟಾಟಾ ಇಂಟರ್‌ನ್ಯಾಷನಲ್ ಮುಖ್ಯಸ್ಥ ಬಿ.ಮುತ್ತುರಾಮನ್ ಹೇಳಿದ್ದಾರೆ.

ಐಷಾರಾಮಿ ಕಾರು ತಯಾರಿಕೆ ಕಂಪೆನಿಗಳಾದ ಜಾಗ್ವಾರ್ ಮತ್ತು ಲಾಂಡ್ ರೋವರ್‌ಗಳನ್ನು ಖರೀದಿಸಿದ ಟಾಟಾ ಗ್ರೂಪ್‌ನ ಶೇ.50 ರಷ್ಟು ಆದಾಯ, ಚೀನಾದಲ್ಲಿ ವಾಹನೋದ್ಯಮ ಕ್ಷೇತ್ರದಿಂದ ಸಂದಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಈಗಾಗಲೇ ಉಕ್ಕು, ಹೋಟೆಲ್‌ ಸಮೂಹ ಮತ್ತು ಐಟಿ ಹೊರಗುತ್ತಿಗೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ವಹಿವಾಟು ವಿಸ್ತರಿಸಲು ಯೋಜನೆಗಳನ್ನು ರೂಪಿಸಿರುವುದಾಗಿ ಟಾಟಾ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ