ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 25 ವರ್ಷಗಳಲ್ಲಿ ನಗರವಾಸಿಗಳ ಸಂಖ್ಯೆ ದ್ವಿಗುಣ:ಮುಖರ್ಜಿ (Urban population | India | Pranab Mukherjee)
Bookmark and Share Feedback Print
 
ದೇಶದ ಗ್ರಾಮೀಣ ಜನತೆ ಉದ್ಯೋಗವಕಾಶ ಮತ್ತು ಉತ್ತಮ ಮೂಲಸೌಕರ್ಯಗಳಿಂದಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದು, 2035ರ ವೇಳೆಗೆ ನಗರವಾಸಿಗಳ ಸಂಖ್ಯೆಯಲ್ಲಿ ದ್ವಿಗುವಾಗಲಿದೆ ಎಂದು ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಆರ್ಥಿಕ ವೃದ್ಧಿ ದರ ಚೇತರಿಕೆಯಿಂದಾಗಿ ನಗರಗಳಿಗೆ ವಲಸೆ ಬರುತ್ತಿರುವ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಮುಂಬರುವ 25 ವರ್ಷಗಳಲ್ಲಿ ಪಟ್ಟಣ ನಗರಗಳ ಜನಸಂಖ್ಯೆಯಲ್ಲಿ ದ್ವಿಗುಣವಾಗಲಿದೆ ಎಂದು ರಿಯಲ್ ಎಸ್ಟೇಟ್ ಡೆವಲೊಪರ್ಸ್ ಅಸೋಸಿಯೇಶನ್‌ ಆಯೋಜಿಸಿದ ಸಮಾರಂಭದಲ್ಲಿ ವಿತ್ತ ಸಚಿವ ಮುಖರ್ಜಿ ತಿಳಿಸಿದ್ದಾರೆ.

ಪ್ರಸ್ತುತ 300 ಮಿಲಿಯನ್ ಜನತೆ ನಗರ, ಪಟ್ಟಣಗಳಲ್ಲಿ ವಾಸಿಸುತ್ತಿದ್ದು, ಅಮೆರಿಕದ ಜನಸಂಖ್ಯೆಗೆ ಸಮವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ 393 ನಗರ ಮತ್ತು ಪಟ್ಟಣಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿದ್ದುಸ 400 ಸಣ್ಣ ಪಟ್ಟಣಗಳಲ್ಲಿ 50,000ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ ಎಂದು ಸಚಿವ ಮುಖರ್ಜಿ ವಿವರಣೆಯನ್ನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ