ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದುರ್ಬಲ ವಹಿವಾಟು ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ ಏರಿಕೆ (Gold | Global cues | Silver | Prices)
Bookmark and Share Feedback Print
 
PTI
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಚಿನ್ನದ ಸಂಗ್ರಹಕಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ ಚಿನ್ನದ ದರ ಪ್ರತಿ 10 ಗ್ರಾಂಗೆ 80 ರೂಪಾಯಿಗಳ ಇಳಿಕೆಯಾಗಿ 20,690 ರೂಪಾಯಿಗಳಿಗೆ ತಲುಪಿದೆ.

ಮತ್ತೊಂದೆಡೆ, ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿ ದರದಲ್ಲಿ ಚೇತರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 9.90 ಡಾಲರ್‌ಗಳ ಕುಸಿತ ಕಂಡು 1,369.50 ಡಾಲರ್‌ಗಳಿಗೆ ತಲುಪಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಪ್ಪಟ ಚಿನ್ನದ ದರದಲ್ಲಿ ಕೂಡಾ ಪ್ರತಿ 10 ಗ್ರಾಂಗೆ 80 ರೂಪಾಯಿಗಳ ಕುಸಿತವಾಗಿ 20,690 ರೂಪಾಯಿಗಳಿಗೆ ತಲುಪಿದೆ.

ಬೆಳ್ಳಿಯ ನಾಣ್ಯ(100 ನಾಣ್ಯಗಳು)ದರದಲ್ಲಿ 100 ರೂಪಾಯಿಗಳ ಏರಿಕೆಯಾಗಿ 49,000 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ