ಯುಇಐಎಲ್‌ನಿಂದ ಪೂ.ಆಫ್ರಿಕಾದಲ್ಲಿ 250 ಮಿನ್ ಡಾಲರ್ ಹೂಡಿಕೆ
ಕಿಗಾಲಿ(ರವಾಂಡಾ), ಶನಿವಾರ, 18 ಡಿಸೆಂಬರ್ 2010( 16:07 IST )
ಭಾರತೀಯ ಮೂಲದ ಕಂಪೆನಿಯಾದ ಯುನಿವರ್ಸಲ್ ಎಂಪಾಯರ್ ಇನ್‌ಫ್ರಾಸ್ಟ್ರಕ್ಚರ್(ಯುಇಐಎಲ್) ಪೂರ್ವ ಆಫ್ರಿಕಾದ ಗರುವಾಂಡ್ ಅಭಿವೃದ್ಧಿ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, 250 ಮಿಲಿಯನ್ ಡಾಲರ್ ವೆಚ್ಚದಲ್ಲಿ ಶೈಕ್ಷಣಿಕ ಕೇಂದ್ರ ಮತ್ತು ಇಂಟಿಗ್ರೆಟೆಡ್ ಫುಡ್ ಪಾರ್ಕ್ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ
ಕಂಪೆನಿಯ ನಿಯೋಗ ರುವಾಂಡಾ ದೇಶಕ್ಕೆ ಭೇಟಿ ನೀಡಿದ್ದು, ರುವಾಂಡಾ ಸರಕಾರದ ಆರು ಸಚಿವರೊಂದಿಗೆ ವಿವರವಾಗಿ ಮಾತುಕತೆ ನಡೆಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಯುಇಐಎಲ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಬಾಲಚಂದ್ರನ್ ನಾಯರ್ ಹಾಗೂ ಆರ್‌ಡಿಬಿಯೊಂದಿಗೆ ಪರಸ್ಪರ ತಿಳುವಳಿಕೆ ಒಪ್ಪಂದ ಪತ್ರಕ್ಕೆ ತಿಳುವಳಿಕೆ ಪತ್ರಕ್ಕೆ ಸಹಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.