ಸಾರ್ವಜನಿಕ ಕ್ಷೇತ್ರದ ಯುನಿಯನ್ ಬ್ಯಾಂಕ್, ಸಾಲದ ಮೇಲಿನ ಮೂಲ ಬಡ್ಡಿ ದರದಲ್ಲಿ ಶೇ.0.50ರಷ್ಟು ಹೆಚ್ಚಳಗೊಳಿಸಿ ಶೇ.13.25ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಈಗಾಗಲೇ ಬಡ್ಡಿ ದರ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ, ಇದೀಗ ಯುನಿಯನ್ ಬ್ಯಾಂಕ್ ಕೂಡಾ 50 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಗೊಳಿಸಿದ್ದು, ಡಿಸೆಂಬರ್ 20 ರಿಂದ ಜಾರಿಗೆ ಬರಲಿದೆ ಎಂದು ಯುನಿಯನ್ ಬ್ಯಾಂಕ್, ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಜುಲೈ 1ರ ನಂತರ ಸಾಲ ಪಡೆದ ಹಳೆಯ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಕೂಡಾ ಅನ್ವಯವಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಬಡ್ಡಿ ದರಗಳು ಮತ್ತಷ್ಟು ಪಾರದರ್ಶಕವಾಗಲಿವೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.