ಚೀನಾದ ಹಣದುಬ್ಬರ ದರ ಮುಂದಿನ ಆರ್ಥಿಕ ವರ್ಷದಲ್ಲಿ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ.ಆದರೆ, ಹಣದ ಒಳಹರಿವು ತಡೆಯುವುದು ಅಸಾಧ್ಯವಾಗಿ ಪರಿಣಮಿಸಿದೆ ಎಂದು ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಲಿವು ಮಿಂಗ್‌ಕಾಂಗ್ ಹೇಳಿದ್ದಾರೆ.
ಹಣದುಬ್ಬರ ದರ 28 ತಿಂಗಳ ಗರಿಷ್ಠ ಏರಿಕೆ ಕಂಡಿದ್ದು, ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಶೇ.5.1ಕ್ಕೆ ಏರಿಕೆ ಕಂಡಿದೆ. ಆಹಾರ ದರಗಳಲ್ಲಿ ಸ್ಥಿರತೆಯನ್ನು ತರಲು ಪ್ರಯತ್ನಿಸಲಾಗುತ್ತದೆ ಎಂದು ಸರಕಾರ ಘೋಷಿಸಿದೆ ಎಂದು ತಿಳಿಸಿದ್ದಾರೆ.
ಚೀನಾ ದೇಶಕ್ಕೆ ಹಣದುಬ್ಬರ ದರ ನಿಯಂತ್ರಿಸುವ ಸಾಮರ್ಥ್ಯವಿದೆ. ಮುಂದಿನ ವರ್ಷದಲ್ಲಿ ಹಣದುಬ್ಬರ ದರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಲಿವು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಹಾರ ದರಗಳು ಹಾಗೂ ಅಗತ್ಯ ವ್ಸತುಗಳ ದರ ಏರಿಕೆಯಿಂದಾಗಿ, ಹಣದುಬ್ಬರ ದರದಲ್ಲಿ ಏರಿಕೆಯಾಗಿದೆ. ಮುಂಬರುವ ವರ್ಷದಲ್ಲಿ ನಿಯಂತ್ರಣಕ್ಕೆ ತರಲು ಸರಕಾರ ಯೋಜನೆಗಳನ್ನು ರೂಪಿಸಿದೆ ಎಂದು ಚೀನಾದ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಲಿವು ಮಿಂಗ್‌ಕಾಂಗ್ ಹೇಳಿದ್ದಾರೆ.