ಮಾರ್ಚ್ ವೇಳೆಗೆ ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆ:ಪ್ರಧಾನಿ
ನವದೆಹಲಿ, ಸೋಮವಾರ, 20 ಡಿಸೆಂಬರ್ 2010( 13:06 IST )
ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾದ ವಾರ್ಷಿಕ ಹಣದುಬ್ಬರ ದರ, ಮಾರ್ಚ್ ವೇಳೆಗೆ ಶೇ.5.5ಕ್ಕೆ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಹಣದುಬ್ಬರ ದರ ನವೆಂಬರ್ ತಿಂಗಳಾಂತ್ಯಕ್ಕೆ ಶೇ.7.48ಕ್ಕೆ ಕುಸಿತ ಕಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯನ್ ಸೆಂಟ್ರಲ್ ಬ್ಯಾಂಕ್‌ಗಳು ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆಯಾಗುವ ವಿಶ್ವಾಸ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಆರ್ಥಿಕ ವೃದ್ಧಿ ದರ 2011ರ ವೇಳೆಗೆ ಶೇ.9-10ಕ್ಕೆ ಏರಿಕೆಯಾಗುವ ಸಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.