ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ ಕಂಗಾಲಾದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಕಾಳ ಸಂತೆ ಮಾರುಕಟ್ಟೆ ಹಾಗೂ ದರ ಏರಿಕೆಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ.
ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಸಿ.ಪಿ.ಜೋಷಿ, ದೇಶದಾದ್ಯಂತ ಆಹಾರ ಧಾನ್ಯಗಳು, ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ. ಕಾಳಸಂತೆ ಮಾರಾಟದಾರರು ಹಾಗೂ ಕಾನೂನುಬಾಹಿರವಾಗಿ ಆಹಾರ ಘಾನ್ಯಗಳನ್ನು ಸಂಗ್ರಹಿಸುವವರ ವಿರುದ್ಧ ಸರಕಾರಗಳು ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಆಹಾರ ಧಾನ್ಯಗಳ ದರ ಏರಿಕೆಯಿಂದಾಗಿ, ಜನಸಾಮಾನ್ಯರು ಕಳವಳಗೊಂಡಿದ್ದಾರೆ. ದರ ಏರಿಕೆ ಸಮಸ್ಯೆಯನ್ನು ನಿಷ್ಪಕ್ಷಪಾತ ಮತ್ತು ನಿರ್ಭಿತಿಯಿಂದ ಎದುರಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ದರ ಏರಿಕೆಗೆ ಕಾರಣವಾಗುವ ಯಾವುದೇ ವ್ಯವಸ್ಥೆಯನ್ನು ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಸಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಸಿ.ಪಿ.ಜೋಷಿ ಹೇಳಿದ್ದಾರೆ.