ರಾಕೆಟ್ ವೇಗದಲ್ಲಿ ಏರುತ್ತಿರುವ ಈರುಳ್ಳಿ ದರವನ್ನು ನಿಯಂತ್ರಿಸಲು, ಕೇಂದ್ರ ಸರಕಾರ ಜನೆವರಿ 15 ರವರೆಗೆ ಈರುಳ್ಳಿ ರಫ್ತು ವಹಿವಾಟು ನಿಷೇಧಿಸಿ ಆದೇಶ ಹೊರಡಿಸಿದೆ.
ಕೃಷಿ ಸಹಕಾರ ಸಂಸ್ಥೆ ನಿಯಂತ್ರಕ ಸಂಸ್ಥೆಯಾದ ನಾಫೆಡ್ ಏಜೆನ್ಸಿಗೆ, ರಫ್ತು ವಹಿವಾಟು ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಫ್ಚು ವಹಿವಾಟಿಗೆ ಅನುಮತಿ ನೀಡಿರುವ 12 ರಫ್ತು ವಹಿವಾಟು ಸಂಸ್ಥೆಗಳಿಗೆ ತಡೆರಹಿತ ಪತ್ರ ನೀಡದಂತೆ ಕೂಡಾ ಸರಕಾರ ಆದೇಶ ನೀಡಿದೆ.
ಕನಿಷ್ಠ ರಫ್ತು ವಹಿವಾಟು ದರವನ್ನು 525 ಡಾಲರ್‌ಗಳಿಂದ 1,200 ಡಾಲರ್‌ಗಳಿಗೆ ಏರಿಕೆಗೊಳಿಸಿದ್ದು, ಆದಷ್ಟು, ರಫ್ತು ವಹಿವಾಟು ತಡೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಜನೆವರಿ 15 ರವರೆಗೆ ಈರುಳ್ಳಿ ರಫ್ತು ವಹಿವಾಟು ನಿಷೇಧಿಸಲು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಪ್ರತಿ ಟನ್ ಈರುಳ್ಳಿ ರಫ್ತು ದರವನ್ನು 1,200 ಡಾಲರ್‌ಗಳಿಗೆ ಹೆಚ್ಚಿಸಲಾಗಿದೆ. ಆದರೆ, ಇಲ್ಲಿಯವರೆಗೆ ಜಾರಿಗೆ ತಂದಿಲ್ಲವೆಂದು ಕೃಷಿ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.