ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ಏರಿಕೆ : ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ 'ಈರುಳ್ಳಿ' (Soaring prices | Imported onion | Pakistan | India)
Bookmark and Share Feedback Print
 
ದೇಶದಲ್ಲಿ ಹೆಚ್ಚುತ್ತಿರುವ ಈರುಳ್ಳಿ ದರ ಏರಿಕೆಯ ಮಧ್ಯೆಯು, ಪಾಕಿಸ್ತಾನದ ಅಟ್ಟಾರಿ- ವಾಘಾ ಗಡಿಯಿಂದ ಅಮದು ಮಾಡಿಕೊಂಡ 13 ಟ್ರಕ್‌ಗಳಷ್ಟು ಈರುಳ್ಳಿ ನವದೆಹಲಿಗೆ ಆಗಮಿಸಿದ್ದು, ಉತ್ತರ ಭಾರತದ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಿಂದ 13 ಟ್ರಕ್ (ಪ್ರತಿ ಟ್ರಕ್‌ನಲ್ಲಿ 5 ರಿಂದ 15 ಟನ್ ಈರುಳ್ಳಿ)ಗಳಪ ವಾಘಾ ಗಡಿಯಿಂದ ಆಗಮಿಸಿವೆ ಎಂದು ಅಮೃತ್‌ಸರ್‌ ಕಸ್ಟಮ್ಸ್ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಲೂಧಿಯಾನಾ, ಅಮೃತ್‌ಸರ್, ಜಾಲಂಧರ್, ಪಂಜಾಬ್ ಮತ್ತು ದೆಹಲಿ ನಗರಗಳ ಮಾರುಕಟ್ಟೆಗಳಿಗೆ ಸರಬರಜಾು ಮಾಡಲು ದೇಶದ ಸುಮಾರು ಐದು ಏಜೆನ್ಸಿಗಳು, ಲಾಹೋರ್‌ನಿಂದ ಈರುಳ್ಳಿಯನ್ನು ಅಮದು ಮಾಡಿಕೊಂಡಿವೆ ಎಂದು ವಿವರಣೆ ನೀಡಿದ್ದಾರೆ.

ಕಸ್ಟಮ್ಸ್ ತೆರಿಗೆ ಸರಕು ಸಾಗಾಣೆ ಎಲ್ಲಾ ವೆಚ್ಚಗಳು ಸೇರಿದಂತೆ ಪಾಕಿಸ್ತಾನದಿಂದ ಬಂದ ಈರುಳ್ಳಿ ದರ ಪ್ರತಿ ಕೆಜಿಗೆ 18-20 ರೂಪಾಯಿಗಳಾಗಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಮದು ವಹಿವಾಟುದಾರರ ಪ್ರಕಾರ, ಪಾಕಿಸ್ತಾನದಿಂದ ಮೊದಲ ಬಾರಿಗೆ ಈರುಳ್ಳಿ ದರವನ್ನು ಅಮುದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ