ಈಗಾಗಲೇ ದರ ಏರಿಕೆ ಬಿಸಿಯಲ್ಲಿ ಬೇಯುತ್ತಿರುವ ಜನತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಈರುಳ್ಳಿ ದರ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿವೆ.
ಪೆಟ್ರೋಲ್ ದರ ಏರಿಕೆಯಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಅಡುಗೆ ಅನಿಲ ದರವೂ 50-100 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವಾರದಲ್ಲಿ ನಡೆಯಲಿರುವ ತೈಲ ಸಚಿವಾಲಯದ ಸಭೆಯಲ್ಲಿ ಅಡುಗೆ ಅನಿಲ ದರ ಏರಿಕೆ ಕುರಿತಂತೆ ಚರ್ಚೆ ನಡೆಯಲಿದ್ದು, ಬಹುತೇಕ ದರ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ವಾರದಲ್ಲಿ ಡೀಸೆಲ್ ದರದಲ್ಲಿ ಕೂಡಾ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆಯಾಗುವ ನಿರೀಕ್ಷೆಗಳಿವೆ.
ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆದ ಅದಿಕಾರಯುತ ಸಚಿವರ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಡೀಸೆಲ್ ಮಾರಾಟದಿಂದ ಪ್ರತಿ ದಿನ 105 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಬಿಪಿಸಿಎಲ್.ಎಚ್‌ಪಿಸಿಎಲ್ ಸೇರಿದಂತೆ ಇತರ ತೈಲ ಕಂಪೆನಿಗಳು ಆತಂಕ ವ್ಯಕ್ತಪಡಿಸಿವೆ.