ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿರುವ ಈರುಳ್ಳಿ ದರ ಏರಿಕೆ ಮುಂದಿನ ಮೂರು ವಾರಗಳ ಅವಧಿಗೆ ಮುಂದುವರಿಯಲಿದ್ದು, ನಂತರ ದರದಲ್ಲಿ ಇಲಿಕೆಯಾಗಲಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ, ಮುಂದಿನ ಎರಡು- ಮೂರು ವಾರಗಳ ಅವಧಿಯಲ್ಲಿ ದರ ಇಳಿಕೆಯಾಗಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಈರುಳ್ಳಿ ದರ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ಸೋಮವಾರದಂದು ಕೇಂದ್ರ ಸರಕಾರ ಜನೆವರಿ 15ರವರೆಗೆ ಈರುಳ್ಳಿ ರಫ್ತು ನಿಷೇಧಿಸಿ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ 35-40 ರೂಪಾಯಿಗಳಿಗೆ ಏರಿಕೆ ಕಂಡಿದ್ದ ಪ್ರತಿ ಕೆಜಿ ಈರುಳ್ಳಿ ದರ,ಇದೀಗ ದೆಹಲಿಯ ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆ ಕಂಡಿದೆ.