ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ರಫ್ತು ವಹಿವಾಟಿಗೆ ನಿಷೇಧ ಹೇರಿದ್ದರಿಂದ, ಈರುಳ್ಳಿ ದರದಲ್ಲಿ ಶೇ.30 ರಷ್ಟು ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಈರುಳ್ಳಿ ಉತ್ಪಾದ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ, ಕಳೆದ ವಾರದ ಅವದಿಯಲ್ಲಿ ಈರುಳ್ಳಿ ದರ ಬಹುತೇಕ ದ್ವಿಗುಣವಾಗಿತ್ತು.
ಭ್ರಷ್ಟಾಚಾರ ಆರೋಪಗಳಿಂದ ತತ್ತರಿಸುತ್ತಿರುವ ಯುಪಿಎ ಸರಕಾರಕ್ಕೆ, ಆಹಾರ ದರಗಳ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಕೇಂದ್ರ ಕೃಷಿ ಸಚಿವಾಲಯ ಮುಂಬರುವ ಜನೆವರಿ 15ರ ವರೆಗೆ ಈರುಳ್ಳಿ ರಫ್ತು ವಹಿವಾಟಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದು, ಪಾಕಿಸ್ತಾನದಿಂದ ಈರುಳ್ಳಿ ಅಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿರುವ ಈರುಳ್ಳಿ ದರ ಏರಿಕೆ ಮುಂದಿನ ಮೂರು ವಾರಗಳ ಅವಧಿಗೆ ಮುಂದುವರಿಯಲಿದ್ದು, ನಂತರ ದರದಲ್ಲಿ ಇಲಿಕೆಯಾಗಲಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ, ಮುಂದಿನ ಎರಡು- ಮೂರು ವಾರಗಳ ಅವಧಿಯಲ್ಲಿ ದರ ಇಳಿಕೆಯಾಗಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಈರುಳ್ಳಿ ದರ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ಸೋಮವಾರದಂದು ಕೇಂದ್ರ ಸರಕಾರ ಜನೆವರಿ 15ರವರೆಗೆ ಈರುಳ್ಳಿ ರಫ್ತು ನಿಷೇಧಿಸಿ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ 35-40 ರೂಪಾಯಿಗಳಿಗೆ ಏರಿಕೆ ಕಂಡಿದ್ದ ಪ್ರತಿ ಕೆಜಿ ಈರುಳ್ಳಿ ದರ,ಇದೀಗ ದೆಹಲಿಯ ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆ ಕಂಡಿದೆ.