ಭಾರತದಿಂದ ಈರುಳ್ಳಿ ಅಮದು ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಈರುಳ್ಳಿ ದರ ಏರಿಕೆಯಿಂದ ಕಂಗಾಲಾದ ದೇಶದ ಈರುಳ್ಳಿ ಮಾರುಕಟ್ಟೆಗಳ ವರ್ತಕರು ಪಾಕಿಸ್ತಾನದಿಂದ ಈರುಳ್ಳಿ ಅಮದಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ, ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಶೇ.25-30 ರಷ್ಟು ಏರಿಕೆ ಕಂಡಿದೆ. ಇದರಿಂದ ನೂತನವಾಗಿ ಈರುಳ್ಳಿ ಅಮದಿಗೆ ಬೇಡಿಕೆ ಸಲ್ಲಿಸುವ ವರ್ತಕರಿಗೆ ಹೊರೆಯಾಗಲಿದೆ ಎಂದು ಅಮೃತ್‌ಸರ್ ಮೂಲದ ವರ್ತಕ ರಾಜ್‌ದೀಪ್ ಉಪ್ಪಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತರಕಾರಿ ವರ್ತಕರು ಪಾಕಿಸ್ತಾನದ ಸಿಂಧ ಪ್ರಾಂತ್ಯದಿಂದ ಪ್ರತಿ ಟನ್ ಈರುಳ್ಳಿಗೆ 400 ಡಾಲರ್ ಪಾವತಿಸಿ ಖರೀದಿಸುತ್ತಿದ್ದರು. ಪಾಕಿಸ್ತಾನದಲ್ಲಿ ಕೂಡಾ ಹೆಚ್ಚಿನ ಈರುಳ್ಳಿ ಉತ್ಪಾದನೆಯಾಗಿಲ್ಲ.ಆದ್ದರಿಂದ ದರ ಏರಿಕೆ ಸಮರ ಮುಂದುವರಿದಿದೆ ಎಂದು ಹೇಳಿದ್ದಾರೆ.
ಅಮೃತ್‌ಸರ್‌ನ ಅಟ್ಟಾರಿ-ವಾಘಾ ಗಡಿ ಭಾಗದಿಂದ 13 ಟ್ರಕ್ ಈರುಳ್ಳಿ ಈಗಾಗಲೇ ದೇಶಕ್ಕೆ ಆಗಮಿಸಿದೆ. 38 ಟ್ರಕ್‌ಗಳು ಭಾರತದ ಗಡಿಯನ್ನು ಪ್ರವೇಶಿಸಲು ಸಿದ್ಧವಾಗಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.