ಡಾಲರ್ ಎದುರಿಗೆ ಏಷ್ಯಾ ಕರೆನ್ಸಿಗಳು ಚೇತರಿಕೆ ಕಂಡಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 5 ಪೈಸೆ ಏರಿಕೆಯಾಗಿ 45.17 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಶೇರುಪೇಟೆಯ ಚೇತರಿಕೆಯ ವಹಿವಾಟು ಹಾಗೂ ಏಷ್ಯಾ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಚೇತರಿಕೆಯಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಯೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 25 ಪೈಸೆ ಏರಿಕೆ ಕಂಡು 45.22/23 ರೂಪಾಯಿಗಳಿಗೆ ತಲುಪಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 5 ಪೈಸೆ ಏರಿಕೆಯಾಗಿ 45.17 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 77.07 ಪಾಯಿಂಟ್‌ಗಳ ಚೇತರಿಕೆ ಕಂಡು 20,137.39 ಅಂಕಗಳಿಗೆ ತಲುಪಿದೆ.