ದೇಶದ ಕೆಲ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 85 ರೂಪಾಯಿಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ , ಕೇಂದ್ರ ಸರಕಾರ ಸೀಮಾ ಸುಂಕದ ದರವನ್ನು ಶೂನ್ಯಕ್ಕೆ ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಈರುಳ್ಳಿ ಮೇಲಿನ ಸೀಮಾ ಸುಂಕದ ತೆರಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರದ ವಿತ್ತಖಾತೆ ಸಚಿವಾಲಯ ಅಶೋಕ್ ಚಾವ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಎದುರಾದ ಅಕಾಲಿಕ ಮಳೆಯಿಂದಾಗಿ, ಉತ್ಪನ್ನದಲ್ಲಿ ಕೊರತೆಯಾಗಿದ್ದು, ಕೆಲ ದಿನಗಳ ಹಿಂದೆ ಪ್ರತಿ ಕೆಜಿ ಈರುಳ್ಳಿಗೆ 35-40 ರೂಪಾಯಿಗಳಿದ್ದ ದರ ಇದೀಗ, ಪ್ರತಿ ಕೆಜಿ ಈರುಳ್ಳಿಗೆ 70-85 ರೂಪಾಯಿಗಳಿಗೆ ಏರಿಕೆ ಕಂಡಿತ್ತು.
ಈರುಳ್ಳಿ ದರ ಏರಿಕೆಯಿಂದ ಬೆಚ್ಚಿಬಿದ್ದ ಕೇಂದ್ರ ಸರಕಾರ, ಜನೆವರಿ 15 ರವರೆಗೆ ರಫ್ತು ವಹಿವಾಟು ಮಾಡದಂತೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಮುಂಬರುವ ಎರಡು-ಮೂರು ವಾರಗಳಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರದ ಕೃಷಿ ಖಾತೆ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.